ಕೈಕಂಬ:  ಮಂಗಳೂರು ತಾಲೂಕಿನ ಅಡ್ಡೂರು ಶ್ರೀ ಕ್ಷೇತ್ರ ನಂದ್ಯ ದೈವಸ್ಥಾನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣುಮೂರ್ತಿ, ಶ್ರೀ ಭಗವತೀ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ “ವರ್ಷಾವಧಿ ಉತ್ಸವ”ವು ಜ.28 ಶನಿವಾರ ಮತ್ತು ಜ.29 ಭಾನುವಾರ ಜರುಗಲಿದೆ.

2

ಜ.21 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಹೋಮ, 9.30 ಕ್ಕೆ ಗೊನೆ ಮುಹೂರ್ತ ಜರುಗಲಿದೆ.

ಜ.2ರಂದು ಬೆಳಿಗ್ಗೆ 10.30ಕ್ಕೆ ನಾಗದೇವರಿಗೆ ತಂಬಿಲ ಸೇವೆ, ಮಧ್ಯಾಹ್ನ 12.00 ಕ್ಕೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮುಡಿಪು ಶುದ್ಧಿ ಮತ್ತು ಮುಡಿಪು ಕಟ್ಟುವುದು. 1.00ಕ್ಕೆ ಪ್ರಸಾದ ವಿತರಣೆ, ಸಂಜೆ 6ಕ್ಕೆ ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕಾಲಾವಧಿ ಪರ್ವ, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ, 9.00ಕ್ಕೆ ಶ್ರೀ ಧೂಮಾವತಿ ಬಂಟ, ಮಹಿಷಂದಾಯ ದೈವಗಳ “ನೇಮೋತ್ಸವ” ಜರುಗಲಿದೆ.

ಜ.29ರಂದು ಸಂಜೆ 5ಕ್ಕೆ ಮರುಪುತ್ತರಿ, ರಾತ್ರಿ 8.00ಕ್ಕೆ ಉಬರ ಕಲ್ಲುರ್ಟಿ ಕಲ್ಕುಡ, ಕಲ್ಲುರ್ಟಿ-ಪಂಜುರ್ಲಿ, ಕೊರತಿ, ಗುಳಿಗ ದೈವಗಳ ಕೋಲ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *