ಬಂಟ್ವಾಳ: ತಾಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.1ರಿಂದ 11ರತನಕ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಇಲ್ಲಿನ ಭಾರೀ ತಿರುವುಗಳಿಂದ ಕೂಡಿದ ರಸ್ತೆ ಮಾತ್ರ ಕಳೆದ 12 ವರ್ಷಗಳಿಂದ ಡಾಂಬರೀಕರಣಗೊಂಡಿಲ್ಲ ಎಂದು ಆರೋಪಿಸಿ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
