ಸುದ್ದಿ9ಬಂಟ್ವಾಳ: ಪ್ರತ್ಯಕ್ಷ ಫೌಂಡೇಶನ್ ಪ್ರವತರ್ಿತ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಆರ್.ಡಿ.ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ಹಿರಿಯ ತರಬೇತುದಾರ ಬಿ.ರಾಮಚಂದ್ರ ರಾವ್ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ವಿದ್ಯಾಥರ್ಿಗಳು ಹಾಗೂ ಯುವ ಜನತೆಗೆ ವಿವಿಧ ಪಠ್ಯೇತರ ವಿಷಯಗಳಲ್ಲಿ ತರಬೇತಿ ನೀಡುವ ಮೂಲಕ ಅವರ ವ್ಯಕ್ತಿತ್ವದ ಸಮಗ್ರ ವಿಕಸನದೊಂದಿಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳುವಲ್ಲಿ ಇಂತಹ ತರಬೇತಿ ಕೆಂದ್ರಗಳು ಮಹತ್ತರ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
ತಾಲೂಕು ಪಂಚಾಯತು ಸದಸ್ಯ ಆನಂದ ಎ.ಶಂಭೂರು, ಉಪನ್ಯಾಸಕ ಬಾಲಕೃಷ್ಣ ನಾಯ್ಕ ಬೆಳ್ಳಾರೆ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಮುಖ್ಯಸ್ಥ ರಮೇಶ ಕಲ್ಲಡ್ಕ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ ನಾಯಕ್ ರಾಯಿ, ಶೃತಿ ಆಟ್ಸರ್್ನ ಸಂಚಾಲಕ ದಿವಾಕರದಾಸ್, ನವಚೇತನ ಸೇವಾ ಟ್ರಸ್ಟ್ ಅಧ್ಯಕ್ಷ ರಾಜ ಪಲ್ಲಮಜಲು, ರಂಗ ಕಲಾವಿದ ಎಚ್ಕೆ.ನಯನಾಡು, ತುಂಬೆ ಉಪ ವಲಯ ಅರಣ್ಯಾಧಿಕಾರಿ ಸೀತಾರಾಮ ಶೆಟ್ಟಿ, ಬಂಟ್ವಾಳ ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಧಮರ್ೇಂದ್ರ ಬಿ., ಕೇಂದ್ರದ ಸಂಯೋಜಕಿ ಪ್ರತಿಮಗೋಪಾಲ ಅಂಚನ್ ಮೊದಲಾದವರಿದ್ದರು.
ತರಬೇತಿ ಕೇಂದ್ರದಲ್ಲಿ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವ್ಯಕ್ತಿತ್ವ ವಿಕಸನ, ಸಂವಹನ ಕಲೆ, ಬರವಣಿಗೆ ಕಲೆ, ಭಾಷಣ ಕಲೆ, ನಾಯಕತ್ವ, ಸಂಘಟನೆ ಕಲೆ, ಶಿಕ್ಷಣ, ಗ್ರಾಮಾಭಿವೃದ್ದಿ ಮೊದಲಾದ ವಿಷಯಗಳಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ.

life skill

By suddi9

Leave a Reply

Your email address will not be published. Required fields are marked *