ಸುದ್ದಿ9ಬಂಟ್ವಾಳ; ಮಾಣಿ ಹಾಲು ಉತ್ಪಾದಕರ ಸಹಾಕಾರಿ ಸಂಘದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮಾಣಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಂ.ನ2013-14 ನೇ ಸಾಲಿನ 13 ನೇ ಹಣಕಾಸು ಯೋಜನೆಯಲ್ಲಿ 1.5 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಶೀಘ್ರ ನಡೆಯಲಿದೆ ಎಂದು ಈ ಸಂದರ್ಭ ಅವರು ತಿಳಿಸಿದರು.ಬಂಟ್ವಾಳ ತಾ.ಪಂ. ಸದಸ್ಯ ದಿನೇಶ್ ಅಮ್ಟೂರು, ಮಾಣಿ ಗ್ರಾ.ಪಂ.ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಗಣೇಶ್ ರೈ, ನಾರಾಯಣ ಭಟ್, ಉಮೇಶ್ ಎಸ್.ಪಿ, ಸನತ್ ಶೆಟ್ಟಿ, ಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದಶರ್ಿ ಯಶವಂತ ಪ್ರಭು, ನಾರಾಐಣ ಪೂಜಾರಿ, ಮುತ್ತಪ್ಪ ಪೂಜಾರಿ ಗುತ್ತಿಗೆದಾರ ಚಿತ್ತರಂಜನ್ ಮೊದಲಾದವರು ಉಪಸ್ಥಿತರಿದ್ದರು.
