ಬಂಟ್ವಾಳ; ಮಡಂತ್ಯಾರು-  ಸಂಚಾರದಿಂದಾಗಿ ರಸ್ತೆಯಿಡೀ ಹದಗೆಟ್ಟು, ಮೋರಿಯೊಂದು ಕುಸಿದು ಅಪಾಯಕಾರಿ ಸನ್ನಿವೇಶ ನಿಮರ್ಾಣಗೊಂಡ ಘಟನೆ ಪಾರೆಂಕಿ ಗ್ರಾಮದ ಲ್ಲಿ ನಡೆದಿದೆ. ಇಲ್ಲಿನ ಪೆದ್ಯಾರು ಎಂಬಲ್ಲಿ ನ ಜಿ.ಪಂ. ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಸದ್ರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು. ಚಾಲಕರು, ಮಾಲಕರು ಇದೀಗ ಆತಂಕದಲ್ಲಿದ್ದಾರೆ. ಇಲ್ಲಿನ ಆಸುಪಾಸಿನಲ್ಲಿರುವ ಅನೇಕ ಕಲ್ಲಿನ ಕೋರೆಗಳಿಗೆ ಸೇರಿರುವ ಘನವಾಹನಗಳಿಂದಾಗಿ ಈ ರಸ್ತೆಗೆ ಈ ದುಃಸ್ಥಿತಿ ಬಂದಿದೆ ಎನ್ನಲಾಗಿದ್ದು, ಕಲ್ಲು ಸಾಗಾಟದ ದೊಡ್ಡ ಲಾರಿಯೊಂದು ಇಲ್ಲಿನ ಮೋರಿಯೊಂದರ ಮೇಲೆ ಸಂಚರಿಸುತ್ತಿದ್ದು, ವೇಳೆ ಮಕ್ಕಳ ಸಾಗಾಟ ವಾಹನಕ್ಕೆ ಸೈಡ್ ಮಾಡಿಕೊಡುವ ಭರದಲ್ಲಿ ರಸ್ತೆಯ ತೀರಾ ಅಂಚಿಗೆ ತೆರಳಿದ್ದು, ಮೋರಿರ ಮಣ್ಣು ಸಹಿತ ಲಾರಿ ಕಂದಕ್ಕೆ ಉರುಳಿತ್ತು. ಇದೀಗ ಈ ಪ್ರದೇಶದಲ್ಲಿ ದೊಡ್ಡ ಕಂದಕವೇ ನಿಮರ್ಾಣವಾಗಿದ್ದು, ಅಪಾಯಗಳನ್ನು ಆಹ್ವಾನಿಸುವಂತಿದೆ.

6 (2)

5 (2)
ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿದ್ದ ಬೆಳ್ತಂಗಡಿ ತಹಶೀಲ್ದಾರ್ ಪರಿಶೀಲನೆ ನಡೆಸಿದ್ದಾರೆ. ಅಪಾಯಕಾರಿ ಸ್ಥಿತಿಯನ್ನು ಅರಿತಿರುವ ಪೊಲೀಸರು ಈ ಕಂದಕದ ಸುತ್ತ ಬ್ಯಾನರ್ ಹಾಗೂ ಟೇಪ್ ಗಳನ್ನು ಅಳವಡಿಸಿದ್ದಾರೆ. ಇಲ್ಲಿನ ಸ್ಥಿತಿ ಗತಿ ಬಗ್ಗೆ ವಿವರಿಸಿರುವ ಮಡಂತ್ಯಾರು ಗ್ರಾ.ಪಂ. ಸದಸ್ಯ ದಿನೇಶ್ ಅವರು, ಈ ಬಗ್ಗೆ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಬೇಕು, ಘನವಾಹನಗಳಿಂದ ರಸ್ತೆ ಹಾಳಾಗುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದ್ದು, ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *