ಬಂಟ್ವಾಳ: ಇಲ್ಲಿನ ಬಂಟ್ವಾಳ ಕಸ್ಬಾ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಶನಿವಾರ ಸುರಿದ ಮಳೆಗೆ ಗುಡ್ಡ ಕುಸಿತ ಉಂಟಾಗಿ 15ಕ್ಕಿಂತಲೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದ್ದು ಸೂಕ್ತ ಪರಿಹಾರ ಕಾರ್ಯ ಒದಗಿಸುವಂತೆ ಅಲ್ಲಿನ ಸಂತ್ರಸ್ತರು ಮಂಗಳವಾರ ಬಂಟ್ವಾಳ ಪುರಸಭೆಗೆ ಆಗಮಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದ ಘಟನೆ ನಡೆಯಿತು. ವಾಡರ್್ ಸದಸ್ಯ ದೇವದಾಸ್ ಶೆಟ್ಟಿ ನೇತೃತ್ವದಲ್ಲಿ ಮಹಿಳೆಯರು ಸಹಿತ 50 ಕ್ಕಿಂತಲೂ ಹೆಚ್ಚು ಮಂದಿ ಪುರಸಭೆಗೆ ಆಗಮಿಸಿ ಅಧ್ಯಕ್ಷೆ ವಸಂತಿ ಚಂದಪ್ಪ ಹಾಗೂ ಮುಖ್ಯಾಧಿಕಾರಿ ಮತ್ತಡಿಯೊಂದಿಗೆ ಮಾತುಕತೆ ನಡೆಸಿದರು.

2 (2)

1 (2)
ಬಂಟ್ವಾಳ- ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಸ್ವಿಎಸ್ ಕಾಲೇಜು ಬಳಿ ಇರುವ ಕಲ್ಲಗುಡ್ಡೆ ಮಳೆಗೆ ಕುಸಿಯಲು ಆರಂಭಿಸಿದೆ. ಖಾಸಗಿ ವ್ಯಕ್ತಿಗಳು ಕಳೆದ ಬೇಸಿಯಲ್ಲಿ ಗುಡ್ಡ ಸಮತಟ್ಟು ಕಾರ್ಯ ಆರಂಬಿಸಿದ್ದೇ ಗುಡ್ಡದ ಮಣ್ಣು ಕುಸಿದು ಬೀಳಲು ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆರಂಭದಲ್ಲೇ ಆತಂಕ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸದ ಹಾಗೂ ಖಾಸಗಿ ವ್ಯಕ್ತಿಗಳು ಮುನ್ನೆಚ್ಚರಿಕೆ ವಹಿಸದ ಪರಿಣಾಮ ಮಳೆಗಾಲ ಬರುತ್ತಿದ್ದಂತೆಯೇ ಗುಡ್ಡ ಕುಸಿಯಲು ಪ್ರಾರಂಭಿಸಿದೆ. ಇದರಿಂದ 15ಕ್ಕಿಂತಲೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದೆ. ಕಳೆದ ಬಾನುವಾರ ಪುರಸಭೆಯ ಮುಖ್ಯಾಧಿಕಾರಿ, ಕಿರಿಯ ಎಂಜನಿಯರ್ ಹಾಗೂ ಸೋಮವಾರ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ದೇವದಾಸ್ ಶೆಟ್ಟಿ, ಪ್ರವೀಣ್ ಬಿ, ಗಂಗಾಧರ್, ಮೊನೀಶ್ ಅಲಿ, ಜಗದೀಶ ಕುಂದರ್, ಮಹಮ್ಮದ್ ನಂದರಬೆಟ್ಟು, ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ಹಾಜರಿದ್ದರು.
ಸಂಜೆಯ ವೇಳೆಗೆ ಅಧ್ಯಕ್ಷೆ ವಸಂತಿ ಅವರ ನೇತೃತ್ವದಲ್ಲಿ ಭೂ ಮಾಲಕರ ಉಪಸ್ಥಿತಿಯಲ್ಲಿ ಸದಸ್ಯರು, ಅಧಿಕಾರಿಗಳು ಹಾಗೂ ಸಂತ್ರಸ್ತರು ಸೇರಿಕೊಂಡು ಪುರಸಭೆಯಲ್ಲಿ ಮಾತುಕತೆ ನಡೆಸಿದರು. ಬಳಿಕ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ತೆರಳಿದ್ದು, ತೀರಾ ಅಪಾಯದಲ್ಲಿರುವ 8 ಮನೆಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು, ಅವರು ವಾಸ ಮಾಡುವ ಮನೆಯ ಬಾಡಿಗೆಯನ್ನು ಭೂ ಮಾಲಕರೇ ಭರಿಸುವುದು, ಕುಸಿತಗೊಂಡ ಸ್ಥಳದಲ್ಲಿ ತಡೆಗೋಡೆ ನಿಮರ್ಾಣ, ಯಾವುದೇ ರೀತಿಯ ಕಷ್ಟನಷ್ಟ ಉಂಟಾದಲ್ಲಿ ಪರಿಹಾರ ಸಹಿತ ಇನ್ನಿತರ ವ್ಯವಸ್ಥೆಯನ್ನು ಭೂ ಮಾಲಕರೇ ನೋಡಿಕೊಳ್ಳ ಬೇಕು ಎಂದು ನಡೆದ ಸಭೆಯಲ್ಲಿ ತೀಮರ್ಾನಿಸಲಾಗಿದೆ.
ಬಿಟಿಡಬ್ಲ್ಯು_ಜು15_2

By suddi9

Leave a Reply

Your email address will not be published. Required fields are marked *