ವಿಟ್ಲ: ಕೆಂಪುಕಲ್ಲು ಪಾಯ ಮತ್ತು ಕೆಂಪುಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕ ಕಾರ್ಯಕ್ರಮ  ವಿಟ್ಲ ಬೊಬ್ಬೆಕ್ಕೇರಿಯ ಗಜಾನನ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಉದ್ಘಾಟಿಸಿದರು.

1

ಸಭಾದ್ಯಕ್ಷತೆಯನ್ನು ಉದಯ ಕುಮಾರ್ ದಂಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಲ್ಫಿ ಡಿ ಸೋಜ ಮತ್ತು ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಭಾಗವಹಿಸಿದ್ದರು. ಸಂಜೀವ ಎಂ ಎಸ್ ಸ್ವಾಗತಿಸಿದರು. ರಾಜೇಶ್ ಬಾಕಿಲ ವಂದಿಸಿದರು. ಹರೀಶ್ ಎಸ್ ಪಿ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *