ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿಯಾಗಿ ನಾಲ್ಕೂವರೆ ವರ್ಷ ಸೇವೆ ಮಾಡಿದ ಜನಾರ್ಧನ ಪದ್ಮಶಾಲಿ ಇವರನ್ನು ಗುರುತಿಸುವ ಕಾರ್ಯಕ್ರಮವು ಎ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ವಹಿಸಿದ್ದರು. ಮಾಜಿ ಅಧ್ಯಕ್ಷರುಗಳಾದ ಲೋಕೇಶ ಮತ್ತು ರಮೇಶ್ ರೈ, ಉಪಾಧ್ಯಕ್ಷೆ ರೇಣುಕಾ ವೇದಿಕೆಯಲ್ಲಿದ್ದರು. ಸೇವಾ ಪ್ರತಿನಿಧಿ ಕೌಶಿತಾ ಮಾಹಿತಿ ನೀಡಿದರು. ರಮ್ಯ ವರದಿ ವಾಚಿಸಿದರು. ಪೂರ್ಣಿಮಾ ಸ್ವಾಗತಿಸಿದರು. ಉಮಾಶ್ರೀ ವಂದಿಸಿದರು.ಪ್ರೇರಣಾ ಸಂಘದ ಮೂಕಾಂಬಿಕಾ ನಿರೂಪಿಸಿದರು.