ವಿಟ್ಲ:ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಸಂಘಟನೆಯ ದಶಮಾನೋತ್ಸವ ಪ್ರಯುಕ್ತ ಮತ್ತು ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಹತ್ತು ವರ್ಷ ಪೂರೈಸಿದರಿಂದ  ವಿಟ್ಲದ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ಸುರಕ್ಷಾ ಹೆಲ್ತ್ ಸೆಂಟರಿನ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ| ಗೀತಪ್ರಕಾಶ್ ಉದ್ಘಾಟಿಸಿ ಅಂಗಾಂಗ ದಾನದ ಮಾಹಿತಿ ನೀಡಿದರು. ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಬೆ ಕೆ ಸೇಸಪ್ಪ ಬೆದ್ರಕಾಡು ಅಧ್ಯಕ್ಷತೆ ವಹಿಸಿದ್ದರು.

0 (1)

0 (2)ಮುಖ್ಯ ಅತಿಥಿಗಳಾಗಿ ಪಡುಬೆಟ್ಟು ಶ್ರೀ ಆದಿನಾಗಬ್ರಹ್ಮ ಗಡಿಯಾಡಿ ಮೊಗರ್ಕಳ ಸೇವಾಟ್ರಸ್ಟ್ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಬಂಟ್ವಾಳ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್, ಮಹಿಳಾ ಸಂಘದ ಅಧ್ಯಕ್ಷೆ ಚಿನ್ನಮ್ಮ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್, ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಪುತ್ತೂರು ಇದರ ಅಧ್ಯಕ್ಷ ಗಿರಿಧರ್ ನಾಯ್ಕ, ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು ವಿಟ್ಲ ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಸಂಚಾಲಕ ಗೋಪಾಲ್ ಕೆ ನೇರಳಕಟ್ಟೆ, ಸದಸ್ಯರಾದ ಮನೋಜ್ ಬೊಳ್ಳಾಯಿ, ದೇವದಾಸ್ ಕೆ ಕಾಡುಮಠ, ಗಾಯತ್ರಿ ಕಲ್ಲಂಚಿಪಾದೆ, ಮೋನಪ್ಪ ಕಲ್ಲಡ್ಕ, ಕಲ್ಯಾಣಿ ಕೆದಿಲ ಹಾಗೂ ಇತರರು ನೇತ್ರದಾನಕ್ಕೆ ಹೆಸರು ನೊಂದಾಯಿಸಿದರು. ಮೋಹನ್‍ದಾಸ್ ಸ್ವಾಗತಿಸಿದರು, ಪ್ರಸಾದ್ ಅನಂತಾಡಿ ವಂದಿಸಿದರು. ಪ್ರಸಾದ್ ಬೊಳ್ವಾರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *