ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ 15ಕ್ಕಿಂತಲೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದೆ. ಸ್ಥಳೀಯ ನಿವಾಸಿಗಳಲ್ಲಿ ಚಿಂತೆ ಆವರಿಸತೊಡಗಿದ್ದು ಸೂಕ್ತ ಪರಿಹಾರ ಕಾರ್ಯ ಒದಗಿಸುವಂತೆ ಸಂತ್ರಸ್ತರಿಂದ ಆಗ್ರಹ ಕೇಳಿ ಬಂದಿದೆ.
ವ್ಯಾಪಕ ಮಣ್ಣು ಅಗೆತದಿಂದಾಗಿ ಕುಸಿಯುವ ಸಾಧ್ಯತೆಯಲ್ಲಿದ್ದ ಎತ್ತರದ ಈ ಗುಡ್ಡ ನಿರೀಕ್ಷೆಯಂತೆ ಕಳೆದೆರಡು ದಿನಗಳ ಹಿಂದೆ ವಿಶಾಲವಾಗಿ ಬಿರುಕು ಬಿಟ್ಟು ಕುಸಿತಕ್ಕೊಳಗಾಗಿದ್ದು ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿರುವುದಲ್ಲದೆ, ಸನಿಹದಲ್ಲಿರುವ ಮನೆಗಳು ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ. ಕೆಲ ಸಮಯದ ಹಿಂದೆ ಖಾಸಗಿ ಉದ್ಯಮಿಗಳು ಈ ಗುಡ್ಡದ ಮಣ್ಣು ಅಗೆದು ಸಮತಟ್ಟು ಮಾಡುವ ಸಂದರ್ಭದಲ್ಲೇ ಪರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮವಾಗಿ ಇದೀಗ ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ನಿಮರ್ಾಣವಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

10

12

4
ಕಲ್ಲಗುಡ್ಡೆ ಕುಸಿತ:
ಬಂಟ್ವಾಳ ಕಸಬಾ ಗ್ರಾಮದಲ್ಲಿರುವ ಈ ಕಲ್ಲಗುಡ್ಡೆ ನಿಜಕ್ಕೂ ಎತ್ತರದ ಗುಡ್ಡೆಯಂತಿರುವ ಪ್ರದೇಶ. ಈ ಪ್ರದೇಶದಲ್ಲಿ ಸಾಕಷ್ಟು ಮನೆಗಳಿದೆ. ಕಳೆದ ನವಂಬರ್, ಡಿಸೆಂಬರ್ ತಿಂಗಳಿನಲ್ಲಿ ಇಲ್ಲಿನ ಗುಡ್ಡವನ್ನು ಅಗೆದು ನೆಲ ಸಮತಟ್ಟು ಮಾಡುವ ಕಾರ್ಯ ಖಾಸಗಿ ವ್ಯಕ್ತಿಗಳಿಂದ ನಡೆದಿದೆ. ಆದಾಗಲೇ ಮಳೆಗಾಲದಲ್ಲಿ ಈ ಗುಡ್ಡ ಸಂಪೂರ್ಣ ಕುಸಿದು ಅಪಾಯಕಾರಿ ಸ್ಥಿತಿ ನಿಮರ್ಾಣವಾಗುವ ಭೀತಿ ಎದುರಾಗಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಲ್ಲದ್ದೆ ಸ್ಥಳೀಯ ಪುರಸಭಾ ಸದಸ್ಯ ದೇವದಾಸ ಶೆಟ್ಟಿಯವರು ಪುರಸಭಾ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಇದ್ಯಾವುದರ ಬಗ್ಗೆಯೂ ಅಂದು ಪುರಸಭೆ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಗುಡ್ಡ ಅಗೆಯುವಿಕೆ ಎಗ್ಗಿಲ್ಲದೆ ನಡೆಯಿತು.
ಈಗ ಏನಾಯಿತು:
ಕಳೆದ ಶನಿವಾರದ ಮಳೆಗೆ ಮೊದಲೇ ಬಿರುಕು ಬಿಟ್ಟಿದ್ದ ಗುಡ್ಡ ವ್ಯಾಪಕವಾಗಿ ಕುಸಿಯಿತು. ಗುಡ್ಡದ ಮಣ್ಣು ರಸ್ತೆಯಲ್ಲೆಲ್ಲಾ ಹರಡಿ ಸಂಚಾರವೂ ಸ್ಥಗಿತಗೊಂಡಿತು. ತಕ್ಷಣ ಪುರಸಭಾ ಸದಸ್ಯ ದೇವದಾಸ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ ಮನೆಗಳಿದ್ದ ಬದಿಯಲ್ಲೇ ಗುಡ್ಡವು ಕುಸಿತಗೊಂಡಿದ್ದರಿಂದ ಮನೆ ನಿವಾಸಿಗಳಿಗೆ ಅಲ್ಲಿ ವಾಸಿಸುವುದೇ ಆತಂಕ ಸೃಷ್ಠಿ ಮಾಡಿತು. ಸುಮಾರು 15ಕ್ಕೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದ್ದು ಕೆಲವು ಮನೆಗಳ ಸ್ಥಿತಿಯಂತೂ ತೀರಾ ಗಂಭೀರವಾಗಿದೆ.
ಅಧಿಕಾರಿಗಳ ಬೇಟಿ:
ಪುರಸಭೆಯ ಮುಖ್ಯಾಧಿಕಾರಿ ಹಾಗೂ ಕಿರಿಯ ಎಂಜನಿಯರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ತಹಶೀಲ್ದಾರ್ ಮಲ್ಲೇ ಸ್ವಾಮಿಯವರೂ ಭೇಟಿ ನೀಡಿದ್ದರು. ಆದರೆ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆರೋಪಿಸುತ್ತಾರೆ.
ಸಂತ್ರಸ್ಥರ ಆಕ್ರೋಶ:
ಘಟನೆ ನಡೆದು ಮೂರು ದಿನಗಳೇ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಪರಸಭಾ ಆಡಳಿತದ ಕ್ರಮವನ್ನು ವಿರೋಧಿಸಿ ಸಂತ್ರಸ್ಥರು ಮಂಗಳವಾರ ಬಂಟ್ವಾಳ ಪುರಸಭೆಗೆ ಆಗಮಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದ್ದೆ ಸೂಕ್ತ ಪರಿಹಾರ ಕ್ರಮಕ್ಕೆ ಒತ್ತಾಯಿಸಿದ್ದರು.
ಖಾಸಗಿ ವ್ಯಕ್ತಿಗಳು ಕಳೆದ ಬೇಸಿಗೆಯಲ್ಲಿ ಗುಡ್ಡ ಸಮತಟ್ಟು ಕಾರ್ಯ ಆರಂಬಿಸಿದ್ದೇ ಗುಡ್ಡದ ಮಣ್ಣು ಕುಸಿದು ಬೀಳಲು ಕಾರಣ. ಈ ಬಗ್ಗೆ ಆರಂಭದಲ್ಲೇ ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಗಮನ ಹರಿಸದ ಹಾಗೂ ಖಾಸಗಿ ವ್ಯಕ್ತಿಗಳು ಮುನ್ನೆಚ್ಚರಿಕೆ ವಹಿಸದ ಪರಿಣಾಮ ಮಳೆಗಾಲ ಬರುತ್ತಿದ್ದಂತೆಯೇ ಗುಡ್ಡ ಕುಸಿಯಲು ಪ್ರಾರಂಭಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಾಂತರ ತೀಮರ್ಾನ:
ಇದೀಗ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ಭೂ ಮಾಲಕರು, ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಸಂತ್ರಸ್ತರ ಸಭೆ ನಡೆದಿದೆ. ತೀರಾ ಅಪಾಯದಲ್ಲಿರುವ 8 ಮನೆಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು, ಅವರು ವಾಸ ಮಾಡುವ ಮನೆಯ ಬಾಡಿಗೆಯನ್ನು ಭೂ ಮಾಲಕರೇ ಭರಿಸುವುದು, ಕುಸಿತಗೊಂಡ ಸ್ಥಳದಲ್ಲಿ ತಡೆಗೋಡೆ ನಿಮರ್ಾಣ, ಯಾವುದೇ ರೀತಿಯ ಕಷ್ಟನಷ್ಟ ಉಂಟಾದಲ್ಲಿ ಪರಿಹಾರ ಸಹಿತ ಇನ್ನಿತರ ವ್ಯವಸ್ಥೆಯನ್ನು ಭೂ ಮಾಲಕರೇ ನೋಡಿಕೊಳ್ಳ ಬೇಕು ಎಂದು ಸಭೆಯಲ್ಲಿ ತೀಮರ್ಾನಿಸಲಾಗಿದೆ.

By suddi9

Leave a Reply

Your email address will not be published. Required fields are marked *