ಬಂಟ್ವಾಳ; ನಂಬಿದ್ರೆ ನಂಬಿ ಬಿಟ್ರೆ ಬಿಡಿ “ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆಯಬೇಕು” ಎಂದು ಸ್ವತಃ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರೇ ಆದೇಶ ಹೊರಡಿಸಿದ್ದಾರೆ. ಮಕ್ಕಳನ್ನು ದತ್ತುಪಡೆಯಲು ಪ್ರತ್ಯೇಕ ಕಾನೂನು-ನಿಯಮಾವಳಿಗಳಿರುವಾಗ ಕ್ಷೇತ್ರ ಶಿಕ್ಷಣಾಧಿಕಾರಿಯವರು ಯಾಕಾಗಿ ಈ ಆದೇಶ ಹೊರಡಿಸಿದ್ದಾರೆ ಎಂದು ಬೆರಗಾಗಬೇಡಿ. ನಿಧಾನ ಕಲಿಕೆಯ ಮಕ್ಕಳು ಕಲಿಕೆಯ ಬಗ್ಗೆ ವಿಶೇಷ ಆಸಕ್ತಿವಹಿಸಬೇಕೆನ್ನುವ ಇರಾದೆಯಿಂದ ಮಕ್ಕಳ ಬಗ್ಗೆ ಶಿಕ್ಷಕರು ಹೆಚ್ಚು ಗಮನನೀಡಲಿ ಎಂಬ ಕಾರಣದಿಂದ ಕ್ಷೇತ್ರ ಶಿಕ್ಷಣಾಧಿಕಾರಿಯವರು ಈ ಆದೇಶ ಹೊರಡಿಸಿದ್ದಾರೆ.

211

215
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ತಾಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ನಿಧಾನ ಕಲಿಕಾ ವಿದ್ಯಾರ್ಥಿಗಳ ದತ್ತು ಪ್ರಕ್ರಿಯೆ..ಸಹಿತ 24 ಅಂಶಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಏನಿದು ದತ್ತು ಪ್ರಕ್ರಿಯೆ..?
ಹತ್ತನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ.. ಗುರುತಿಸಿದ ಮಕ್ಕಳನ್ನು ಆಯಾ ಶಾಲಾ ಶಿಕ್ಷಕರು ದತ್ತು ಪಡೆದುಕೊಳ್ಳಬೇಕು, ಹಾಗೂ ದತ್ತು ಪಡೆದುಕೊಂಡ ವಿದ್ಯಾರ್ಥಿಯ ಬಗ್ಗೆ ಆಯಾ ಶಿಕ್ಷಕರು ವಿಶೇಷ ಆಸ್ಥೆ ವಹಿಸಬೇಕು. ಆ ವಿದ್ಯಾರ್ಥಿ ಯ ಕಲಿಕಾ ಮಟ್ಟಗಳನ್ನು ಪರಿಶೀಲಿಸುವುದರ ಜೊತೆಯಲ್ಲಿ ಕ್ಲಿಷ್ಟ ವಿಷಯಗಳ ಬಗ್ಗೆ ಪೂರಕ ಅಂಶಗಳನ್ನು ತಿಳಿಯಪಡಿಸುವುದು, ಆಯಾ ವಿದ್ಯಾರ್ಥಿಯ ಜೊತೆ ನೇರ ಸಂಪರ್ಕವಿರಿಸಿಕೊಂಡು ಪುಸ್ತಕಗಳ ಪರಿಶೀಲನೆ ಮಾಡುವುದು ಪೋಷಕರೊಂದಿಗೆ ಚರ್ಚಿಸುವುದು ಇತ್ಯಾದಿ ಸೇರಿಕೊಂಡಿದೆ.
ಜೊತೆಯಲ್ಲಿ ಭಾಷಾ ಸಾಮಥ್ರ್ಯ ಬೆಳೆಸಲು ಮಿಂಚುಪಟ್ಟಿಗಳ ಬಳಕೆ, ವಾಕ್ಯರಚನೆ, ವ್ಯಾಕರಣಾಂಶಗಳ ಕಲಿಕೆಗೆ ಹಾಗೂ ಅಭಿವ್ಯಕ್ತಿಗೆ ಹೆಚ್ಚು ಅವಕಾಶ ನೀಡುವುದು, ವಿಷಯಗಳಿಗೆ ಸಂಬಂಧಿಸಿದಂತೆ ಅಂತಜರ್ಾಲ ಬಳಸಿಕೊಂಡು ಸಂಬಂಧಿಸಿದ ಪಾಠದ ಪೂರಕ ಅಂಶಗಳನ್ನು ಬಳಸಿ, ಕಂಪ್ಯೂಟರ್ ಆಧಾರಿತ ಕಲಿಕೆ ನಡೆಸಲು ಪ್ರಯತ್ನಿಸುವುದು, ನಿಧಾನ ಕಲಿಕಾ ವಿದ್ಯಾರ್ಥಿಗಳ  ಗುಂಪು ರಚಿಸಿ ಕೊನೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸುವುದು,  ಹೆಚ್ಚು ಹೆಚ್ಚು ಘಟಕ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಂಲೇ  ಸ್ವ ಮೌಲ್ಯಮಾಪನ ಮಾಡಿಸುವುದು, ಪ್ರತೀ ತಿಂಗಳು ಮುಖ್ಯ ಶಿಕ್ಷಕರ ಸಭೆ ಕರೆದು ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಫಲಿತಾಂಶ ಹೆಚ್ಚಿಸುವಲ್ಲಿ ಚರ್ಚಿಸುವಿಕೆ ಮತ್ತು ಶಾಲೆಗಳಲ್ಲಿ ಅನುಷ್ಠಾನ, 10ನೇ ತರಗತಿಗೆ ಶಾಲಾ ಅವಧಿಗೆ ಒಂದು ಗಂಟೆ ಮುಂಚಿತವಾಗಿ ಒಂದು ಅವಧಿಯನ್ನು ಆರಂಭಿಸುವುದು, ಎಲ್ಲಾ ಶಿಕ್ಷಕರು ಶಾಲಾ ಆರಂಭಕ್ಕೆ ಅರ್ಧಗಂಟೆ ಮುಂಚಿತವಾಗಿ ಶಾಲೆಯಲ್ಲಿ ಹಾಜರಿರುವುದು, ಬೆಳಿಗ್ಗೆ ಮತ್ತು ಸಂಜೆ ವಿಷಯವಾರು ವಿಶೇಷ ತರಗತಿಗಳನ್ನು ನಡೆಸುವುದು ಮೊದಲಾದ ಸೂಚನೆಗಳನ್ನು ಆದೇಶದಲ್ಲಿ ನೀಡಲಾಗಿದೆ.
ಶಿಕ್ಷಣಾಧಿಕಾರಿಯವರ ಸೂಚನೆಯಂತೆ ಬಂಟ್ವಾಳ ತಾಲೂಕಿನಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ತಾಲೂಕಿನ ಪ್ರೌಢಶಾಲೆಗಳಲ್ಲಿ ನಿಧಾನಕಲಿಕೆಯ ಮಕ್ಕಳನ್ನು ಶಿಕ್ಷಕರು ದತ್ತು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಶಾಲೆ ಆರಂಭಗೊಂಡು ಇನ್ನೂ 2 ತಿಂಗಳು ಮುಗಿಯುವ ಮುನ್ನವೇ ಕಲಿಕೆಯ ಆಸಕ್ತಿ ಹೆಚ್ಚಿಸುವ ಶಿಕ್ಷಣ ಇಲಾಖೆಯ ಈ ಹೊಸ ಚಿಂತನೆ ಎಷ್ಟು ಫಲ ನೀಡೀತು ಎನ್ನುವುದೇ ಸದ್ಯದ ಕುತೂಹಲ. ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಕರ್ಷೀಸುವುದು  ಈ ದತ್ತು ಪ್ರಕ್ರಿಯೆಯ ಮುಖ್ಯ ಉದ್ದೇಶ, ಆ ಮೂಲಕ ಮಕ್ಕಳು ಹಾಗೂ ಮಕ್ಕಳ ಹೆತ್ತವರ ಜೊತೆಯಲ್ಲಿ ಶಿಕ್ಷಕರು ಸಂಪರ್ಕದಲ್ಲಿದ್ದು ಕಲಿಕಾ ವಿಚಾರಗಳನ್ನು ಚರ್ಚಿಸಬಹುದು. ಹಿಂದೆ ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾಗ ಈ ದತ್ತು ಪ್ರಕ್ರಿಯೆ ಯ ನ್ನು ಅನುಷ್ಠಾನಗೊಳಿಸಿದ್ದೆ. ಇದೀಗ ಬಂಟ್ವಾಳದಲ್ಲಿ ಮುಂದುವರಿಸಲಾಗಿದೆ,

By suddi9

Leave a Reply

Your email address will not be published. Required fields are marked *