ಬಂಟ್ವಾಳ: ಬಿ.ಸಿ.ರೋಡ್ ರಂಗೋಲಿ ಹೋಟೆಲ್ ನಲ್ಲಿ ಜು. 17ರಂದು ಗುರುವಾರ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಬಂಟ್ವಾಳ ರೋಟರಿ ಕ್ಲಬ್, ಕ್ಷೇಮಾ ಆಸ್ಪತ್ರೆ ದೇರಳಕಟ್ಟೆ ಆಶ್ರಯದಲ್ಲಿ ಉಚಿತ ಆರೋಗ್ಯ, ನೇತ್ರ ದಂತ ತಪಾಸಣೆ ಶಿಬಿರ ನಡೆಯಿತು.
ಕ್ಲಬ್ ಅಧ್ಯಕ್ಷ ಯನ್.ಪ್ರಕಾಶ ಕಾರಂತ, ಕಾರ್ಯದರ್ಶಿ ಸಂಜೀವ ಪೂಜಾರಿ ಗುರುಕೃಪ, ಬಸ್ತಿ ಮಾಧವ ಶೆಣೈ, ಡಾ| ರಮೇಶಾನಂದ ಸೋಮಯಾಜಿ, ಅಶ್ವಿನ್ ಕುಮಾರ್ ರೈ, ಶಾಂತಿಪ್ರಕಾಶ್ ಡಿ’ಸೋಜ, ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ, ಡಾ| ಸಂದೇಶ್ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು. ಸುಮಾರು 400 ಮಂದಿ ಶಿಬಿರದಲ್ಲಿ ಫಲಾನುಭವಿಗಳಾಗಿ ಸೇವೆ ಪಡೆದರು.