ಕೈಕಂಬ: ಸಂಸ್ಕಾರ ಸಂಸ್ಕೃತಿ  ಗುರುಪರಂಪರೆಯ ಗುರು ಮತ್ತು ಶಿಷ್ಯರ ಭಾಂದವ್ಯ ಅವಿನಾನುಭಾವ ಸಂಭಂದದ ಕೊಂಡಿಯಾಗಿದೆ. ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಿದರೆ  ಮುಂದಿನ  ದೇಶ ಉತ್ತಮ ಪ್ರಜೆಯಾಗಲು ಸಾಧ್ಯ ಗ್ರಾಮೀಣ ಭಾಗದ  ಕನ್ನಡ ಶಾಲೆಗಳಿಗೆ ಊರ ಮಹಾನೀಯರ ಪ್ರೋತ್ಸಾಹ ಅಗತ್ಯವಿದೆ . ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಕನ್ನಡದ ಶಾಲೆಯಲ್ಲೆ ಕಲಿಯಲು ಮಕ್ಕಳಿಗೆ ಉತ್ತೇಜನ ನೀಡಬೇಕು . ಎಂದು ಸ್ವಾಮಿ ವಿವೇಕ ಚೈತನ್ಯಾನಂದ ಅವರು ಹೇಳಿದರು. ಅವರು ಶನಿವಾರ ಬಡಗಬೆಳ್ಳೂರು ಶಾಲಾ ವಾರ್ಷಿಕೋತ್ಸವದ  ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುದೀರ್ಘ ಕಾಲ  38 ವರ್ಷಗಳ ಕಾಲ ಬಡಗಬೆಳ್ಳೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತಿ ಹೊಂದಲಿರುವ  ಸಂಕಪ್ಪ ಶೆಟ್ಟಿ ಹಾಗೂ ಸಹ ಶಿಕ್ಷಕಿ ಲಿಲ್ಲಿ ಡಿ” ಸೋಜಾ ಇವರನ್ನು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸನ್ಮಾನಿಸಿದರು.

2- 7

2- 13

2-1

2-2

2-3

2-4

2-5
2-8

2-9

2-10

2-11

2-12

2-14

2-15

2-6

ಒಂದು ಸಂಸ್ಥೆಗೆ ಕಟ್ಟಡ ಬೆಂಚು ನೀರು ಹೇಗೆ ಮುಖ್ಯವೊ ಹಾಗೇಯೆ ಉತ್ತಮವಾದ ಉಪನ್ಯಾಸ  ಅಷ್ಟೇ ಅಗತ್ಯ . ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಲ್ಲದೇ ಉತ್ತಮ ಸಂಸ್ಕಾರ ನೀಡಿ ವ್ಯಕ್ತಿತ್ವ ನಿರ್ಮಿಸಿ ಮಕ್ಕಳನ್ನು ತಿದ್ದಿ ಸರಿದಾರಿಗೆ ತರುವ ಮುಖಾಂತರ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ನಾಟಕ ಯಕ್ಷಗಾಣ ಆಟೋಟ ಸ್ಪರ್ಧೇಯಲ್ಲಿ ಭಾಗವಹಿಸಲು ಹುರಿದುಂಬಿಸಬೇಕು ಎಂದು ಡಾ. ಪಾಂಡುರಂಗ ನಾಯಕ್ ಅವರು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.2-16

ಅಭಿನಂದನಾ ಭಾಷಣವನ್ನು ನಾರ್ಶ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಲತಾ ಮಾಡಿದರು. ವೇದಿಕೆಯಲ್ಲಿ ಸಚೀಂದ್ರನಾಥ ರೈ, ಎಸ್.ಡಿ. ಎಮ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಕೆ.ನರೇಂದ್ರನಾಥ ಭಂಡಾರಿ ಸ್ವಾಗತಿಸಿ ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ತುಳು ನಾಟಕ “ಲಡಾಯಿ ಮಲ್ಪಡೆ” ಎಂಬ ತುಳು ಹಾಸ್ಯಮಯ ನಾಟಕ ಜರುಗಿತು.

By suddi9

Leave a Reply

Your email address will not be published. Required fields are marked *