ಬಂಟ್ವಾಳ: ಮಸ್ಜಿದುಲ್ ಖಿಳ್‍ರ್ ಮತ್ತು ದಾರುಲ್ ಉಲೂಂ ಮದರಸ, ಎಸ್‍ವೈಎಸ್, ಎಸ್ಸೆಸ್ಸೆಫ್ ಸಂಯುಕ್ತ ಆಶ್ರಯದಲ್ಲಿ ಎ.15ರಂದು ಸಾಯಂಕಾಲ 7 ಗಂಟೆಗೆ ಪೇರಿಮಾರ್‍ನಲ್ಲಿ ಗ್ರಾಂಡ್ ಸುನ್ನೀ ಇಜ್‍ತಿಮಾ ನಡೆಯಲಿದ್ದು ಇದರ ಪ್ರಚಾರಾರ್ಥ ಭಾನುವಾರ ಪೇರಿಮಾರ್‍ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರ ಸಂಯೋಜಕ ಇಬ್ರಾಹಿಂ ಕರೀಂ ಉದ್ಘಾಟಿಸಿದರು, ಪಿ.ಎಂ. ಶಾಭಿ ಅಧ್ಯಕ್ಷತೆ ವಹಿಸಿದ್ದರು. ಪೇರಿಮಾರ್ ಖತೀಬ್ ರಫೀಕ್ ಸಅದಿ ದುಆ ಮಾಡಿದರು. ಪುದು ಗ್ರಾ.ಪಂ.ಉಪಧ್ಯಕ್ಷ ಹಾಶೀರ್ ಪೇರಿಮಾರ್ ಮಾತನಾಡಿದರು. ವೇದಿಕೆಯಲ್ಲಿ ಸದರ್ ಮುಅಲ್ಲಿಂ ಬಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಜಮಾಅತ್ ಕೋಶಾಧಿಕಾರಿ ಹುಸೈನ್ ಬಿ., ಎಸ್‍ಎಸ್‍ಎಫ್ ಶಾಖಾ ಅಧ್ಯಕ್ಷ ಶಿಹಾಬ್ ಪೇರಿಮಾರ್, ಆಡಳಿತ ಸಮಿತಿ ಸದಸ್ಯ ನಝೀರ್ ಪೇರಿಮಾರ್, ವೆನ್‍ಲಾಕ್ ಆಸಪತ್ರೆಯ ಬ್ಲಡ್‍ಬ್ಯಾಂಕ್ ಟೆಕ್ನೊಲಾಜಿಸ್ಟ್ ಭರತ್ ಕಿರಣ್, ಎಂಟೋನಿ ಡಿಸೋಜಾ, ಎಸ್‍ಎಸ್‍ಎಫ್ ಕೋಶಾಧಿಕಾರಿ ಅಬ್ದುಲ್ ಸಮದ್, ಪ್ರಧಾನ ಕಾರ್ಯದರ್ಶಿ ರಹೀಂ.ಬಿ.ಆರ್, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಿ. ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಲೂಲ್ ಸ್ವಾಗತಿಸಿ, ಉನೈಸ್ ಬಿ. ಕೃತಜ್ಞತೆ ಸಲ್ಲಿಸಿದರು.