ಫರಂಗಿಪೇಟೆ : ಯೋಗದಿಂದ ವಿಶ್ವವನ್ನೇ ರೋಗ ಮುಕ್ತವಾಗಿಸಲು ಸಾಧ್ಯ ,ವಿಶ್ವವೇ ನಮ್ಮ ಯೋಗದ ಆಕರ್ಷಣೆಗೆ ಒಳಗಾಗುತ್ತಿದೆ.ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿಯವರಾದ ಶ್ರೀ ಕೃಷ್ಣ ಮೂರ್ತಿಯವರು .ವಿಶ್ವ ಹಿಂದೂ ಪರಿಷತ್ , ಮಾತ್ರ ಮಂಡಳಿ ,ದುರ್ಗಾವಾಹಿನಿಬಜರಂಗ ದಳ, ಕುಮ್ಡೇಲು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಹತ್ತು ದಿನಗಳ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

IMG_1559ವೇದಿಕೆಯಲ್ಲಿ ಶ್ರೀ ಮಧ್ವರಾಜ್ ಬಿ.ಕಲ್ಮಾಡಿ (ಅಭಿವೃದ್ಧಿ ಅಧಿಕಾರಿ,ಜೀವ ವಿಮಾ ಅಧಿಕಾರಿ ಬಂಟ್ವಾಳ), ಶ್ರೀ ಬಾಲಕೃಷ್ಣ ಕಿಣಿ (ಜಿಲ್ಲಾ ಪ್ರಚಾರಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪುತ್ತೂರು ಜಿಲ್ಲೆ) ಭರತ್ ಕುಮ್ಡೇಲು ಬಜರಂಗ ದಳ ಪ್ರಮುಖರು, ಪುರಂದರ ಬಲ್ಯಾಯ ಉಪಸ್ಥಿತರಿದ್ದರು.ಯೋಗ ಗುರುಗಳಾದ ಶ್ರೀ ದೇವರಾಜ ಶಿರಸಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *