ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ 20 ಓವರ್ಗಳ ಅಂಡರ್ಆರ್ಮ್ ಲೀಗ್ ಮಾದರಿಯ ವಾಲ್ಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಶಿರ್ತಾಡಿಯ ಮಕ್ಕಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಕ್ರೀಢಾಂಗಣದಲ್ಲಿ ಎ.17ರಿಂದ 23ರವರೆಗೆ ನಡೆಯಲಿದೆ.
ಪುರೋಹಿತ ಶ್ರೀಕಾಂತ್ ಭಟ್ ಮಕ್ಕಿ, ವಾಲ್ಪಾಡಿ ಮುಹಿಯದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ವಾಲ್ಪಾಡಿ, ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೋ ಎ.17ರಂದು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ನೆರವೇರಿಸಲಿದ್ದಾರೆ. ಜವಾಹರಲಾಲ್ ಶಾಲೆಯ ಮುಖ್ಯ ಶಿಕ್ಷಕ ಟಿ.ಕೆ. ವೆಂಕಟ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ನಗದಿನ ಜೊತೆ ಮುಡಿ ಅಕ್ಕಿ ಬಹುಮಾನ:
ಪಂದ್ಯದಲ್ಲಿ ಪ್ರಥಮ ಸ್ಥಾನಿ ತಂಡಕ್ಕೆ 1 ಲಕ್ಷ ರೂ. ನಗದು, `ಸಾಮ್ರಾಜ್ಯ ಟ್ರೋಫಿ’ ಹಾಗೂ 11 ಮುಡಿ ಅಕ್ಕಿ, ದ್ವಿತೀಯ ಸ್ಥಾನಿ ತಂಡಕ್ಕೆ 60 ಸಾವಿರ ನಗದು, ಸಾಮ್ರಾಜ್ಯ ಟ್ರೋಫಿ ಹಾಗೂ 11 ಮುಡಿ ಅಕ್ಕಿ, ತೃತೀಯ ಸ್ಥಾನಿ ತಂಡಕ್ಕೆ 20 ಸಾವಿರ ನಗದು ಹಾಗೂ ಸಾಮ್ರಾಜ್ಯ ಟ್ರೋಫಿ, ಚತುರ್ಥ ಬಹುಮಾನವಾಗಿ 15 ಸಾವಿರ ನಗದು ಹಾಗೂ ಸಾಮ್ರಾಜ್ಯ ಟ್ರೋಫಿ ನೀಡಲಾಗುತ್ತದೆ. ಶತಕ ಭಾರಿಸಿದ ಆಟಗಾರನಿಗೆ ರೂ. 10 ಸಾವಿರ, ಅರ್ಧಶತಕಕ್ಕೆ 5 ಸಾವಿರ ರೂಪಾಯಿಗಳ ನಗದು ಬಹುಮಾನ ಪ್ರತೀ ಪಂದ್ಯದಲ್ಲೂ ನೀಡಲಾಗುತ್ತದೆ.
ಏ.23ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಸಂಚಾಲಕ ಎಸ್.ಡಿ. ಸಂಪತ್ ಸಾಮ್ರಾಜ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಭಯಚಂದ್ರ ಬಹುಮಾನ ವಿತರಿಸಲಿದ್ದು, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಚಾವಡಿಮನೆ ಜಗನ್ನಾಥ ಶೆಟ್ಟಿ, ಕೆ.ಪಿ. ಜಗದೀಶ ಅಧಿಕಾರಿ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಚಿತ್ರ ನಿರ್ಮಾಪಕ ಉದಯ ಶೆಟ್ಟಿ ಕಾಂತಾವರ, ಜೋಯ್ಲಸ್ ಡಿಸೋಜಾ ತಾಕೋಡೆ, ಉದ್ಯಮಿಗಳಾದ ಸುರೇಶ್ ಶೆಟ್ಟಿ ಮಿಜಾರು, ತಿಮ್ಮಯ್ಯ ಶೆಟ್ಟಿ ಮೂಡುಬಿದಿರೆ, ಫಕೀರಬ್ಬ ಮರೋಡಿ, ಸತೀಶ್ ವಿ. ಶೆಟ್ಟಿ ಶಿರ್ತಾಡಿ, ಅಶ್ವಿನ್ ಜೊಸ್ಸಿ ಪಿರೇರಾ, ರವೀಂದ್ರ ಶೆಟ್ಟಿ ಬಜಗೋಳಿ, ರುಕ್ಕಯ್ಯ ಪೂಜಾರಿ ಅಳಿಯೂರು, ಸುಕೇಶ್ ಶೆಟ್ಟಿ ಶಿರ್ತಾಡಿ, ವಿಶ್ವನಾಥ್ ಸಾಲ್ಯಾನ್ ಅಳಿಯೂರು, ಲಕ್ಷ್ಮಣ ಪೂಜಾರಿ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಮಣ್ಣ ಶೆಟ್ಟಿ ಶಿರ್ತಾಡಿ, ಗೋಪಾಲ್ (ನೋಣಯ್ಯ) ಮಕ್ಕಿ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ಬಡಕುಟುಂಬಗಳಿಗೆ ಅಕ್ಕಿವಿತರಣೆ, ಶರಣ್ ಕೈಕಂಬ ಮತ್ತು ಬಳಗದಿಂದ ಸಂಗೀತ ರಸಮಂಜರಿ ನಡೆಯಲಿರುವುದು ಎಂದು ಸಂಘಟಕ ಅಶ್ರಫ್ ವಾಲ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.