ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪುದು ಗ್ರಾಮ ಪಂಚಾಯತ್ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನ ಸೋಮವಾರ ಫರಂಗಿಪೇಟೆಯಲ್ಲಿ ನಡೆಯಿತು.
ಸ್ವತಃ ಕಸ ಹೆಕ್ಕುವ ಮೂಲಕ ಅಭಿಯಾನಕ್ಕೆ ಸ್ಪೂರ್ತಿ ತುಂಬಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಸ್ವಚ್ಚತೆಯನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಎಲ್ಲಾ ಪಂಚಾಯಿತಿಗಳು ಕೂಡ ಅದನ್ನು ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಬೇಕು. ಸ್ವಚ್ಛತೆ ಕಾಪಾಡಲು ಪ್ರತಿಯೊಬ್ ವ್ಯಕ್ತಿಯ ಸಹಕಾರ ಬೇಕು ಆಗ ಮಾತ್ರ ಸ್ವಚ್ಛತಾ ಆಬೀಯಾನ ಅರ್ಥಪೂರ್ಣವಾಗಲಿದೆ ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರಾ ಕಸ ಸಂಗ್ರಹಿಸುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಸ್ವಚ್ಛತಾ ಅಭಿಯಾನ ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ ನಿತ್ಯ ನಿರಂತರವಾಗಬೇಕು, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಉಪಧ್ಯಕ್ಷ ಅಬ್ಬಾಸ್ ಅಲಿ, ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯರಾದ ರಮ್ಲಾನ್, ಗಣೇಶ್ ದತ್ತನಗರ, ಮನೋಜ್ ಆಚಾರ್ಯ ನಾಣ್ಯ, ಲಕ್ಷ್ಮೀ, ಲೀನಾ ಡಿಸೋಜಾ, ಹಿಲ್ಡಾ, ವಸಂತಿ ಕೆ.ಶೆಟ್ಟಿ, ಝಾಹೀರ್ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಅರುಣ್ ಕುಮಾರ್ ನುಳಿಯಾಲುಗುತ್ತು, ಮಹಮ್ಮದ್ ಮರಿಪಳ್ಳ, ಪುರಂದರ ಬಲ್ಯಾಯ ಮತ್ತಿತರರು ಹಾಜರಿದ್ದರು. ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಪುದು ಗ್ರಾ.ಪಂ. ಸಿಬ್ಬಂದಿಗಳು ಸ್ವಚ್ಛತಾ ಜಾಥದಲ್ಲಿ ಪಾಲ್ಗೊಂಡರು.