ಬಂಟ್ವಾಳ : ತುಂಬೆ ಗ್ರಾ.ಪಂ. ಆಶ್ರಯದಲ್ಲಿ ಜೂ. 5ರಂದು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತುಂಬೆ ಬಂಟರ ಭವನದಿಂದ ತುಂಬೆ ಜಂಕ್ಷನ್ ಖಾಸಗಿ ಆಸ್ಪತ್ರೆಯ ತನಕ ಕಸಕಡ್ಡಿ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚಗೊಳಿಸಿ ಮಂಗಳೂರು ಪಚ್ಚನಡಿ ತ್ಯಾಜ್ಯ ಸಂಸ್ಕರಣಕ್ಕೆ ಎರಡು ಲಾರಿಗಳಲ್ಲಿ ಕಳುಹಿಸಿಕೊಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ ಕಸ ಹೆಕ್ಕುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ವ್ಯವಸ್ಥೆಯ ಜವಾಬ್ದಾರಿ ವಹಿಸಿದ್ದು, ಮಾರ್ಗದ ಬದಿಯಲ್ಲಿ ಎಸೆಯುವ ತ್ಯಾಜ್ಯದ ದುಷ್ಪರಿಣಾಮದ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಅರಿವನ್ನು ಮೂಡಿಸಿದರು. ಅಭಿವೃದ್ದಿ ಅಧಿಕಾರಿ ದೇವಪ್ಪ ಪಿ.ಆರ್. ವಿಶ್ವಪರಿಸರದ ಬಗ್ಗೆ ವಿವರಣೆ ನೀಡಿದರು. ಫಾ| ಮುಲ್ಲರ್ ಆಸ್ಪತ್ರೆಯ ವ್ಯ.ನಿರ್ದೇಶಕ ಪಾ| ರೋಶನ್ ಕ್ರಾಸ್ತಾ ಸ್ವಚ್ಚತೆಯ ಅರಿವನ್ನು ಮಾಡಿದರು. ಆಸ್ಪತ್ರೆಯ ಸಿಬ್ಬಂದಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತಾ.ಪಂ. ಗಣೇಶ ಸುವರ್ಣ, ವೈದ್ಯಾ„ಕಾರಿ ಡಾ| ಕಿರಣ್ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಅರುಣ್ ಕುಮಾರ್ ಬೊಳ್ಳಾರಿ, ಪ್ರಕಾಶ್ ರೊಟ್ಟಿಗುಡ್ಡೆ, ನೇತ್ರ, ಶೋಭಲತಾ ಶೆಟ್ಟಿ, ಹರಿಣಾಕ್ಷಿ, ಜಾನಮ್ಮ, ಮಾಜಿ ಸದಸ್ಯ ಮೋನಪ್ಪ ಬೆಳ್ಚಡ, ರಾಜೀವ ಗಾಣದಲಚ್ಚಿಲ್, ಸುಶಾನ್ ಆಚಾರ್ಯ, ಗೋಪಾಲ ಬೆದ್ರಾಡಿ, ಶ್ರೀನಿವಾಸ ಪರ್ಲಕ್ಕೆ , ಪ್ರಶಾಂತ ಕೊಟ್ಟಾರಿ, ದೂಮ ವಳವೂರು ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಸಂಜೀವ ಪೂಜಾರಿ ವಂದಿಸಿದರು.