ಬಂಟ್ವಾಳ: ತಾಲೂಕಿನ ಸುಮಾರು 50 ವರ್ಷಗಳ ಕಾಲ ಬಾಳಿದ ಸರಕಾರದ ಹಳೆಯ ಕಟ್ಟಡವೊಂದು ಮಂಗಳವಾರ ನೆಲಸಮವಾಗಿದೆ. ಬಂಟ್ವಾಳ ತಾಲೂಕು ಕಚೇರಿಯ ರೆಕಾರ್ಡ್ ರೂಂ ಕಟ್ಟಡವನ್ನು 1966ರಂದು ನಿರ್ಮಿಸಲಾಗಿತ್ತು. ಇದೀಗ ಮಿನಿ ವಿಧಾನ ಸೌಧ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಳೆಯ ಕಟ್ಟಡವನ್ನು ನೆಲಸಮ ಮಾಡಲಾಯಿತು ಹಳೆಯ ಕಟ್ಟಡದಲ್ಲಿದ್ದ ಕಡತಗಳನ್ನು ನೂತನ ಮಿನಿ ವಿಧಾನ ಸೌಧದ ಎರಡನೇ ಮಹಡಿಗೆ ಸ್ಥಳಾಂತರ ಮಾಡಲಾಗಿದೆ.

ರೆಕಾರ್ಡ್ ರೂಂ ಅಧಿಕಾರಿಗಳು, ಸಿಬ್ಬಂದಿಗಳು ನೂತನ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಟ್ಟಡ ತೆರವು ಕಾಮಗಾರಿಯ ಬಳಿಕ ಇತರ ಕಚೇರಿ ನೆಲಸಮಗೊಳ್ಳಲಿದೆ.ಸಚಿವ ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಿಂದ ಸುಮಾರು ಹತ್ತು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಿನಿವಿಧಾನಸೌಧದ ಕಾಮಗಾರಿಯು ಪೂರ್ಣಹಂತಕ್ಕೆ ತಲುಪಿದ್ದು,ಲೋಕಾರ್ಪಣೆಗಾಗಿ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯಾವಕಾಶಕ್ಕಾಗಿ ಕಾಯಲಾಗುತ್ತಿದೆ.ಈನಡುವೆ ಪಕ್ಕದ ಉಪನೋಂದಣಿ,ಹಳೇ ತಾ.ಪಂ.ಕಟ್ಟಡ ಸಹಿತ ಹಳೇ ಕಟ್ಟಡ ನೆಲಸಮಗೊಳಿಸಿ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ.