ಬಂಟ್ವಾಳ: ಕಳಾಯಿ ಸೇವಾ ಪ್ರತಿಷ್ಠಾನ ವತಿಯಿಂದ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಕಳಾಯಿ ಚಂದ್ರಮೌಳಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ  ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ಸಭಾಂಗಣದಲ್ಲಿ ನಡೆದ ಟ್ರಸ್ಟ್ ನ ಉದ್ಘಾಟನೆ ನೆರವೇರಿಸಿದ ಶ್ರೀ ಮಠ ಸಂಸ್ಥಾನ ದಾಭೋಲಿ ಕಿರಿಯ ಶ್ರೀಗಳಾದ ದತ್ತಾನಂದ ಸರಸ್ವತಿ ಸ್ವಾಮೀಜಿ ಅವರು ಸಾಂಕೇತಿಕವಾಗಿ ಪುಸ್ತಕ ವಿತರಿಣೆಯ ಮೂಲಕ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು.

ಶಾಲೆಯಲ್ಲಿ ಪುಸ್ತಕ ವಿತರಣಾ ಸಂದರ್ಭದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಕಳಾಯಿ ಶ್ರೀನಿವಾಸ ನಾಯಕ್,ಸುಮಿತ್ರ ಶ್ರೀನಿವಾಸ ನಾಯಕ್,ಸ್ಥಾಪಕಾಧ್ಯಕ್ಷ ಕಳಾಯಿ ರಾಜಾರಾಮ ನಾಯಕ್,ಟ್ರಸ್ಟಿಗಳಾದ ಮೀರಾ ಸುಭಾಷ್ ನಾಯಕ್ ಗುಂಡೂರು,ರೇಖಾ ಸತೀಶ್ ಹಂಡಿರು,ಶಾಲೆಯ ನಿವ್ರತ್ತ ಶಿಕ್ಚಕರಾದ ಲಕ್ಮೀ ನಾರಾಯಣ ಆಚಾರ್ಯ,ರಾಧಾಕ್ರಷ್ಣ ಎಳಚಿತ್ತಾಯ,ಪಂ.ನ ಮಾಜಿಅಧ್ಯಕ್ಷ ಬಾಲಕ್ರಷ್ಣ ಅಂಚನ್,ಸದಸ್ಯರಾದ ಜಯಂತ ಪ್ರಭು,ಅರುಣರಾವ್ ಕಲ್ಕಂಜ ಮೊದಲಾದವರಿದ್ದರು,ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ನಾಯಕ್ ಸ್ವಾಗತಿಸಿದರು. ಅಧ್ಯಾಪಕ ರವಿಚಂದ್ರ ವಂದಿಸಿದರು.

By suddi9

Leave a Reply

Your email address will not be published. Required fields are marked *