ಬಿ.ಸಿ.ರೋಡ್: ಬೈಪಾಸ್ ರಸ್ತೆಯ ಕಾಮಾಜೆ ತಿರುವಿನಲ್ಲಿ ಧರೆಗುರುಳುವ ಸ್ಥಿಯಲ್ಲಿರುವ ಮರವೊಂದು ವಿದ್ಯುತ್ ತಂತಿಗೆ ಒರಗಿದ್ದು ಅಪಾಯವನ್ನು ಎದುರು ನೋಡುತ್ತಿದೆ. ಮರವನ್ನು ತೆರವುಗೊಳಿಸುವಂತೆ ಸ್ಥಳೀಯ ಪುರಸಭಾ ಸದಸ್ಯ, ಪುರಸಭಾ ಮುಖ್ಯಾಧಿಕಾರಿ, ಅರಣ್ಯ, ಮೆಸ್ಕಾಂ ಇಲಾಖೆಗೆ ದೂರು ನೀಡಿದ್ದರೂ ಈ ವರೆಗೆ ಮರವನ್ನು ತೆರವುಗೊಳಿಸಿಲ್ಲ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.