ಬಂಟ್ವಾಳ : ಪುರಸಭೆ , ಲಯನ್ಸ್ ಕ್ಲಬ್ ಬಂಟ್ವಾಳ, ಸ್ವಚ್ಛ ಬಂಟ್ವಾಳ ಮತ್ತು ಟೀಮ್ ವಿವೇಕ್ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಬಿ.ಸಿ. ರೋಡಿನ ಲಯನ್ಸ್ ಕ್ಲಬ್ ನ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭ ರಾಮಕೃಷ್ಣ ಮಿಷನ್ ಸ್ವಚ್ಛ ಬಂಟ್ವಾಳ ಆಂದೋಲನದಡಿಯಲ್ಲಿ ಪರಿಸರ ಜಾಗ್ರತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಧರ್ಮವ್ರತಾನಂದ ಜಿ ಮಾತನಾಡುತ್ತಾ ಸ್ವಚ್ಛತೆ ಎಂಬುದು ವೈಯ್ಯಕ್ತಿಕ ಮಟ್ಟದಲ್ಲಿ ಪ್ರಾರಂಭವಾಗಬೇಕು ಮತ್ತು ಜೀವಂತವಾಗಬೇಕು. ಸ್ವಚ್ಛತೆ ನಮ್ಮ ಜವಾಬ್ದಾರಿ ಎಂಬುದನ್ನು ಮರೆತಿರುವುದಕ್ಕೆಯೇ ಪ್ರಧಾನಿಗಳು ಸ್ವಚ್ಛತೆಯನ್ನು ಅಭಿಯಾನದಂತೆ ಕೈಗೆತ್ತಿಕೊಂಡಿದ್ದು, ಅದಕ್ಕೆ ರಾಮಕೃಷ್ಣ ಮಠವು ಸಾಥ್ ನೀಡುತ್ತಾ ಬಂದಿದೆ ಎಂದರು. ಗ್ರಾಮೀಣ ಮಟ್ಟದಿಂದಲೇ ಆಡಳಿತಾತ್ಮಕವಾಗಿ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದರೆ ಸ್ವಚ್ಛ ಭಾರತ ಕನಸ್ಸನ್ನು ನನಸಾಗಲು ಸಾಧ್ಯ . ಎಂದ ಅವರು ಸ್ವಚ್ಛತೆ ನಮ್ಮ ಕರ್ತವ್ಯವೆಂದು ತಿಳಿದು ದೇಶವನ್ನು ಸ್ವಚ್ಛವಾಗಿಡಲು ದಿಟ್ಟ ಹೆಜ್ಜೆ ಇಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಷ್ಟೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ ಪಶ್ಚಿಮ ಘಟ್ಟಗಳ ಪ್ರಾಮುಖ್ಯತೆ ಮತ್ತು ಅದರ ಉಳಿವಿಗಾಗಿ ಅಗತ್ಯವಿರುವ ಹೋರಾಟದ ಬಗ್ಗೆ ವಿವರಿಸಿದರು.
ಬಿ.ಮೂಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಜಾಕ್ ನೀರಿನ ಮಿತಯುತ ಬಳಕೆಯ ಅವಶ್ಯಕತೆಯ ಮತ್ತು ಪುರಸಭೆ ಆಯೋಜಿಸಿದ್ದ ನಿರ್ಮಲ ಬಂಟ್ವಾಳ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಮುಖ್ಯಾಧಿಕಾರಿ ಸುಧಾಕರ್, ಪ್ರಮುಖರಾದ ಪ್ರೋ.ತುಕರಾಮ್ ಪೂಜಾರಿ, ಸುಂದರ್ ರಾವ್, ರಾಜಶೇಖರ್ ಹೆಬ್ಬಾರ್, ಸುರೇಂದ್ರ ಶಣ್ಯ , ವಿನಾಯಕ್ ಪೈ, ಅರ್ಜುನ್ ಪೈ,ವಿವಿದ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.