ಬಂಟ್ವಾಳ :ಮಂಗಳೂರಿನ ಸ್ವಸ್ತಿಕ್ ಕನ್ಸ್ ಲ್ಟೆನ್ಸಿ ಸಂಸ್ಥೆಯ ವತಿಯಿಂದ ಬಂಟ್ವಾಳ ತಾ.ನ ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯಲ್ಲಿ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರವು ನಡೆಯಿತು.ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಶಿಬಿರದ ಉದ್ಘಾಟನೆ ನೆರವೇರಿಸಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ಶಿಬಿರದ ಅವಶ್ಯವಿದ್ದು,ಇದರ ಸದುಪಯೋಗಪಡೆಯುವಂತೆ ಕರೆ ನೀಡಿದರು.ಮೇರಮಜಲು ಗ್ರಾ.ಪಂ.ಅಧ್ಯಕ್ಷ ಸತೀಶ ನಾಯ್ಕ್ ಸಭಾಧ್ಯಕ್ಷತೆ ವಹಿಸಿದ್ದರು.

20170612_131757ಇದೇ ವೇಳೆ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಜೇಸಿ ವಲಯ ತರಬೇತುದಾರರಾದ ಅಕ್ಷತಾ ಗಿರೀಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಶಾಲಾಭಿವ್ರದ್ದಿ ಸಮಿತಿಯ ಗೌರವಾಧ್ಯಕ್ಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ,ಸ್ವಸ್ಥಿಕ್ ಸಂಸ್ಥೆಯ ಪರಮೇಶ್ವರ ಮೊಯಿಲಿ,ಜಗದಿಉಶ ಹೊಳ್ಳ,ನರಸಿಂಹ ಹೇರ್ಳೆ,ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ರಾವ್ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿದರು‌.ಹರಿಕ್ರಷ್ಣ ಅಡಿಗ ವಂದಿಸಿದರು.ಸಿದ್ದೀಕ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *