ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.ಇದರ ಜೊತೆಗೆ ಬಿ.ಸಿ.ರೋಡಿನ ಸಮಸ್ಯೆಯು ಅನಾವರಣಗೊಂಡಿದೆ. ಜಡಿಮಳೆಯೊಂದಿಗೆ ಸಿಡಿಲು,ಮಿಂಚು,ಗಾಳಿ ಇಲ್ಲದಿರುವುದರಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಳ್ಳಿಗೆ ಗ್ರಾಮದಲ್ಲಿ ಮನೆಯೊಂದರ ಕಂಪೌಂಡುಗೋಡೆ ಕುಸಿದಿರುವುದು ಹೊರತು ಪಡಿಸಿದಂತೆ ಉಳಿದಂತೆ ಹಾನಿಯ ಕುರಿತು ಮಾಹಿತಿಯಿಲ್ಲ. ಧಾರಾಕಾರ ಮಳೆಯಿಂದಾಗಿ ಕೈಕಂಬ ಪರಿಸರದಲ್ಲಿ ಮಳೆನೀರು ಚರಂಡಿಸೇರದೆ ರಸ್ತೆಯಲ್ಲೇ ನಿಂತಿದ್ದರಿಂದ ಈಜುಕೊಳ ನಿರ್ಮಾಣವಾಗಿತ್ತು.ಪರಿಣಾಮ ಸುಮಾರು ಮೂರು ತಾಸುಗಳ ಕಾಲ ಸಂಚಾರದಲ್ಲಿ ತೊಡಕುಂಟಾಯಿತು.IMG_20170611_095938

ರವಿವಾರ ಇದೇ ರೀತಿಯಲ್ಲಿ ಬಿ.ಸಿ.ರೋಡಿನ ಬಸ್ ನಿಲ್ದಾಣದ ಹಿಂಬದಿಯಲ್ಲಿ ನೀರುನಿಂತ ದ್ರಶ್ಯ ಕಂಡುಬಂದಿದೆ.ಇಲ್ಲೂ ನೀರು ಹರಿಯಲು ಚರಂಡಿ ಇದ್ದರೂ ನೀರು ಮಾತ್ರ ಚರಂಡಿಗೆ ಇಳಿಯದೇ ರಸ್ತೆ ಮೇಲಿನಿಂದಲೇ ಹರಿಯುತ್ತಿದ್ದರಿಂ ಜನರು ಓಡಾಡಲು ಪರದಾಡಬೇಕಾಯಿತು.ಅಲ್ಲದೆ ಕಸದ ರಾಶಿಯು ಇಲ್ಲಿದ್ದು, ನೀರಿನೊಂದಿಗೆ ತೇಲಲಾರಂಬಿಸಿತು.ಕಳೆದ ಹಲವು ಸಮಯಗಳಿಂದ ಮನೆ,ಮನೆ ತ್ಯಾಜ್ಯ ಸಂಗ್ರಹ ಕೂಡ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಪುರವಾಸಿಗಳಿಂದ ಕೇಳಿಬಂದಿದೆ. ಬಿ.ಸಿ.ರೂಡಿನ ರಿಕ್ಷಾ ಭವನದ ಮುಂಬಾಗ ಪ್ರತಿನಿತ್ಯ ನಿಂತಿರುವ ತ್ಯಾಜ್ಯ ತುಂಬಿದ ಲಾರಿಗೆ ಮಳೆನೀರು ಬಿದ್ದು ,ಆ ಕೊಳಚೆ ನೀರು ರಸ್ಥೆಯಲ್ಲಿ ಹರಿಯುವುದರಿಂದ ಈದಾರಿಯಾಗಿ ಸಂಚರಿಸುವುದೇ ದುಸ್ತರವೆನಿಸಿದೆ.ಈ ಪರಿಸರವಿಡಿ ರ್ದುನಾತ ಬೀರುತ್ತಿದ್ದು, ಸೂಳ್ಳೆ ಹರಡುವ ಕೇಂದ್ರದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈಬಗ್ಗೆ ಸ್ಥಳೀಯ ಪುರಸಭಾ ಸದಸ್ಯ ಪುರಸಭಾಧಿಕಾರಿಗಳ ಗಮನಸೆಳೆದಿದ್ದರೂ,ಯಾವುದೇ ಪ್ರಯೋಜನವಾಗಿಲ್ಲ.ಕೆಲ ಭಾಗಗಳಲ್ಲಿ ಇನ್ನು ಕೂಡ ಚರಂಡಿಯ ಹೂಳೆತ್ತುವ ಕಾರ್ಯ ನಡೆಯದಿದ್ದು,ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿದೆ.ಮಳೆಗೆ ಮುನ್ನ ಪುರಸಭೆ ಸಾಕಷ್ಟು ಪೂರ್ವತಯಾರಿ ನಡೆಸದಿದ್ದರಿಂದ ಇಂತಹ ಎಡವಟ್ಟು ,ಸಮಸ್ಯೆಗಳು ಮೊದಲ ಮಳೆಗೆ ಅನಾವರಣಗೊಂಡಿದೆ.ತುಂಬಿದ ನೇತ್ರಾವತಿ….ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಜಡಿಮಳೆಯಿಂದಾಗಿ ನೇತ್ರಾವತಿ ನದಿಯಲ್ಲೂ ನೀರು ತುಂಬಿ ಹರಿಯುತ್ತಿದೆ.ಕೆಲ ತಗ್ಗು ಪ್ರದೇಶ,ಗದ್ದೆ,ತೋಟದಲ್ಲೂ ನೀರು ನಿಂತಿದೆ.

By suddi9

Leave a Reply

Your email address will not be published. Required fields are marked *