ಬಂಟ್ವಾಳ: ಇಲ್ಲಿನ ರಾಮನಗರದ ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ ಇದರ ಆರನೇ ವರ್ಷದ ಪ್ರಯುಕ್ತ ಹಾಗೂ ಸೀತಾ ಶೀನಾ ಶೆಟ್ಟಿ ಸ್ಮರಣಾರ್ಥ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮ ಭಾನುವಾರ ವ್ಯಾಯಮ ಶಾಲೆಯಲ್ಲಿ ನಡೆಯಿತು.

BTW_JUNE15_8
ಪುರಸಭೆ ಸದಸ್ಯ ದೇವದಾಸ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳು ಜೀವನದಲ್ಲಿ ಶಿಸ್ತನ್ನು ಮೈಗೂಡಿಕೊಂಡು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಶ್ರೀ ರಾಮಾಂಜನೆಯ ವ್ಯಾಯಮ ಶಾಲೆ ಕೊಡಮಾಡುವ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮಂದಿರದ ಗೌರವಾಧ್ಯಕ್ಷ ಗಣೇಶ್‍ಶೆಟ್ಟಿ ರಾಮನಗರ ಮಾತನಾಡಿ ವಿದ್ಯಾರ್ಥಿಗಳು ವಿದ್ಯವಂತರಾಗಿ ರಾಮಾಂಜನೆಯ ಮಂದಿರಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು. ಆಗ ಪುಸ್ತಕ ವಿತರಣೆ ಕಾರ್ಯಕ್ರಮವೂ ಸಾರ್ಥಕವಾಗುತ್ತದೆ ಎಂದರು. ಎಸ್‍ಎಸ್‍ಎಲ್‍ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚಿತ್ತರಂಜನ್ ಹಾಗೂ ಜಯಪ್ರಸಾದ್ ಅವರನ್ನು ಅಭಿನಂದಿಸಲಾಯಿತು.

ಉದ್ಯಮಿ ಸುಮತಿ ಜಗನ್ನಾಥ ಶೆಟ್ಟಿ, ರಾಮ ಭಜನಾ ಮಂದಿರದ ಅಧ್ಯಕ್ಷ ನಾಗೇಶ್ ಶೆಟ್ಟಿ, ವ್ಯಾಯಮ ಶಾಲೆಯ ಅಧ್ಯಕ್ಷ ರಾಜೇಶ್ ಕಲ್ಲಗುಡ್ಡೆ, ಮಾಜಿ ಅಧ್ಯಕ್ಷ ಹರೀಶ್ ಸಾಲ್ಯಾನ್ ಅಜೆಕಲ, ಉಪಾಧ್ಯಕ್ಷ ವಿಜಯ ಕಲ್ಲಗುಡ್ಡೆ, ಕೋಶಾಧಿಕಾರಿ ಸಂದೇಶ್ ಹೊಸ್ಮಾರ್, ಕಾರ್ಯದರ್ಶಿ ಕೃತಿಕ್ ರಾಮನಗರ, ಸಲಹೆಗಾರರಾದ ಪ್ರಭಾಕರ ಅರ್ಬಿಗುಡ್ಡೆ, ದಿನೇಶ್ ಅಜೆಕಲ, ಮಾಸ್ತರ್ ಮಾದವ ಶೆಟ್ಟಿ, ಧನುಷ್ ಆಚಾರ್ಯ, ಸಂಜಿತ್, ಸ್ವರಾಜ್ ಬೈಪಾಸ್, ಅಮಿತ್ ಶೆಟ್ಟಿ, ಹರ್ಷಿತ್, ಪ್ರಜ್ವಲ್ ಅಜೆಕಲ, ಶಶಿಕಿರಣ್, ಅಮೃತ್, ಧನರಾಜ್ ಅಜೆಕಲ ಹಾಗೂ ವ್ಯಾಯಮ ಶಾಲೆಯ ಸದಸ್ಯರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *