ಬಂಟ್ವಾಳ: ಧರ್ಮಸ್ಥಳ ರೂಟಿನಲ್ಲಿ ಬೆಳಗ್ಗಿನ ಮತ್ತು ಸಂಜೆಯ ಪೀಕ್ಅವರ್ ನಲ್ಲಿ ಹೆಚ್ಚುವರಿಯಾಗಿ   ಕೆಎಸ್ ಆರ್ ಟಿ ಎಸ್ ಬಸ್ ಗಳನ್ನು ಒಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಮಂಗಳೂರು ವಿಭಾಗೀಯ ಸಂಚಾರ ಅಧಿಕಾರಿ ಎಂ.ವೆಂಕಟೇಶ್ ಭರವಸೆ ನೀಡಿದ್ದಾರೆ.ಕ.ರಾ.ರ.ಸಾ.ನಿಗಮದ ಪುತ್ತೂರುವಿಭಾಗಕ್ಕೂಳಪಟ್ಟ ಬಿ.ಸಿರೋಡ್ ಘಟಕದಲ್ಲಿ ಗುರುವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಸಾರಿಗೆ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.20170615_114958

ಸಾರ್ವಜನಿಕರೊಬ್ಬರ ಲಿಖಿತ ಅಹವಾಲಿಗೆ ಸ್ಪಂದಿಸಿದ ಅವರು,ಬಿ.ಸಿ.ರೋಡ್ ಡಿಪ್ಪೋದಿಂದಲೇ  ಈರೂಟಿನಲ್ಲಿ ಕನಿಷ್ಠ ಮಡಂತ್ಯಾರುವರೆಗೆ  ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಬಸ್ ಓಡಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ಇತ್ತೀಚಿಗಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೆ ಕೆಎಸ್ಆರ್ ಟಿಸಿ ಉತ್ತಮ ಸೇವೆ ನೀಡುತ್ತಿದೆ.ಬಹುತೇಕವಾಗಿ ಬಸ್ಸಿನ ಕೊರತೆಯನ್ನು ಕೂಡ ನೀಗಿಸಲಾಗಿದೆ ಎಂದ ಅವರು ಕಲವೊಂದು ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲ್ಲು ಪ್ರಯತ್ನಿಸಲಾಗುವುದು ಎಂದರು.ಹಿಂದಿನ ಕಾಲದಲ್ಲಿ ಬಸ್ಗಳ ಸಮಯಪರಿಪಾಲನೆಯಿಂದಾಗಿ ನಿನ್ನೆ ಬರಬೇಕಾದ ಬಸ್ ಇಂದು ಬರುತ್ತಿದೆಯೋ ಎಂದು ಮಾತನಾಡಿಕೊಳ್ಳುತ್ತಿದ್ದರು.

ಆದರೆ ಪ್ರಸಕ್ತದಿನಗಳಲ್ಲಿ ಕೆಎಸ್ ಆರ್ ಟಿಸಿ ಸಮಯ ಪರಿಪಾಲನೆಯಲ್ಲೂ ಸುಧಾರಣೆಯಾಗಿರುವುದು ಅಭಿನಂದನೀಯ ಎಂದು ಹಿರಿಯ ಪ್ರಯಾಣಿಕರೊಬ್ಬರು ಅಭಿಪ್ರಾಯಪಟ್ಟರು.ಪ್ರಯಾಣಿಕರ ಅನುಕೂಲತೆಗಾಗಿ ಬಸ್ನ ಹಿಂಬದಿ ಮತ್ತು ಮುಂಭಾಗದಲ್ಲಿ ಶಾಶ್ವತವಾಗಿ ಉಳಿಯಲು ಸ್ಟೀಕರ್ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ.ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಇಲ್ಲವೇ ದೂರವಾಣಿ ಮೂಲಕ ತಮ್ಮನ್ನುಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ಸಂಚಾರ ಅಧಿಕಾರಿ ವೆಂಕಟೇಶ್ ಈಸಂದರ್ಭದಲ್ಲಿ ತಿಳಿಸಿದರು.

ಪುತೂರಿನಿಂದ ವಿಟ್ಲ-ಅಳಿಕೆಗೆ ಹೆಚ್ಚುವರಿ ಬಸ್ ಓಡಿಸಬೇಕು,ಹಾಗೆಯೇ ವಿಟ್ಲ-ಅಳಿಕೆ ಬಸ್ ನ್ನು ಬೈರಿಕಟ್ಟೆ ವರೆಗೂ ವಿಸ್ತರಿಸಬೇಕು, ಅಳಿಕೆ-ಬೆಂಗಳೂರು ವೇಗದೂತ ಬಸ್ ನ್ನು ಪುನರಾರಂಭಿಸಬೇಕು,ಹಿರಿಯ ನಾಗರಿಕರಿಗೆ ಬಿ.ಸಿ.ರೋಡ್ ಡಿಪ್ಪೊದಲ್ಲಿ ಗುರುತಿನ ಕಾಡ್೯ ವಿತರಿಸಲು ಕ್ರಮಕೈಗೊಳ್ಳಬೇಕು ಹೀಗೆ ಹಲವಾರು ಬೇಡಿಕೆಯ ಅಹವಾಲುಗಳು ಸಲ್ಲಿಕೆಯಾಯಿತು.ಸಂಜೆಯವರೆಗೂ ಅಧಿಕಾರಿಗಳು ಉಪಸ್ಥಿತರಿದ್ದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.ಈಸಂದರ್ಭದಲ್ಲಿ ಬಿ.ಸಿ.ರೋಡ್ ಡಿಪ್ಪೋದ ಉಸ್ತುವಾರಿ ಅಧಿಕಾರಿ ಜಯಕರ ಶೆಟ್ಟಿ,ಬಿ.ಸಿ.ರೋಡ್ ಡಿಪ್ಪೋ ಮೆನೇಜರ್ ಪಿ.ಇಸ್ಮಾಯಿಲ್,ಸಹಾಯಕ ಅಧಿಕಾರಿ ರಮೇಶ್ ಶೆಟ್ಟಿ ವಾಮದಪದವು ರವರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *