ಬಂಟ್ವಾಳ: ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ಫಲಾನುಭವಿಗಳಿಗೆ ಗ್ರಾ.ಪಂ.ನೀಡಿದಾಗ ಅಂತಹ ಗ್ರಾಮ ಪಂಚಾಯತ್ಗಳು ಅಭಿವೃದ್ದಿಯತ್ತ ಸಾಗುವುದರಲ್ಲಿ ಯಾವುದೇ ಸಂದೇಹ ಬೇಡ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯ ಎಂದು ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ. ಪೂಜಾರಿ ಹೇಳಿದರು ಅವರು ಬಾಳ್ತಿಲ ಗ್ರಾ.ಪಂ.ನ ವತಿಯಿಂದ ಪಂಚಾಯತ್ ಭವನದಲ್ಲಿ 13ನೇ ಹಣಕಾಸು ಮತ್ತು ಗ್ರಾ.ಪಂ.ನ ಸ್ವಂತ ನಿಧಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ನೀಡುವ ಕಾರ್ಯ ಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಫಲಾನುಭವಿಗಳು ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಉತ್ತಮ ಯೋಜನೆಗಳನ್ನು ಪಡೆದುಕೊಂಡು ಸುಧಾರಿತ ಜೀವನ ನಡೆಸಲು ಸಾಧ್ಯ, ಗ್ರಾ.ಪಂ.ನ ವತಿಯಿಂದ ಜನರಿಗೆ ಮಾಹಿತಿ ನೀಡುವ ಮತ್ತು ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗಬೇಕಿದೆ ಜೊತೆಗೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿ ಎಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ವಿಠಲ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಶಾಲಿನಿ ಪ್ಲಾಸ್ಟಿಕ್ ಮುಕ್ತ ಗ್ರಾಮದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಪರಿಸರ ಸ್ನೇಹಿ ಕೈ ಚೀಲ ಬಿಡುಗಡೆ ನಡೆಯಿತು.
ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಲಕ್ಮೀ ಗೋಪಾಲಚಾರ್ಯ, ಗ್ರಾ.ಪಂ.ಉಪಾಧ್ಯಕ್ಷ ಪೂರ್ಣಿಮಾ , ಗ್ರಾ.ಪಂ.ಸದಸ್ಯರಾದ ಸುಂದರ ಸಾಲಿಯಾನ್, ವೆಂಕಟರಾಯ ಪ್ರಭು, ಶಿವರಾಜ್, ರೇಣುಕಾ, ವೀಣಾ, ಪುಷ್ಪಾ ಬಿ ಶೆಟ್ಟಿ , ವಸಂತ ಸಾಲಿಯಾನ್ ಮತ್ತು ಗುಲಾಬಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಮೋಹನ್ ಪಿ ಎಸ್ ಸ್ವಾಗತಿಸಿ ಪಿಡಿಒ ಸಂಧ್ಯಾ ವಂದಿಸಿದರು.
