ಬಂಟ್ವಾಳ:ಬಿ.ಸಿ.ರೋಡಿನ ರಂಗಮಂದಿರದಿಂದ ಕೈಕುಂಜೆವರೆಗಿನ ಕಾಂಕ್ರೇಟ್ ರಸ್ತೆ ಮೂಲ ಅಂದಾಜುಪಟ್ಟಿಯಂತೆ ನಿರ್ವಹಿಸಿಲ್ಲ ಮತ್ತು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ದೂರಿನ ಹಿನ್ನಲೆಯಲ್ಲಿ ಬೆಂಗಳೂರು ಲೋಕಾಯುಕ್ತ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲ ಇಂಜಿನಿಯರ್ ನೇತ್ರತ್ವದ ತಂಡ ಗುರುವಾರ ನಡೆಸಿದ ಪರಿಶೀಲನಾ ತನಿಖಾವರದಿಗೆ ದೂರುದಾರ,ಪುರಸಭೆಯ ವಿಪಕ್ಷ ನಾಯಕ ಗೋವಿಂದ ಪ್ರಭು  ಅಕ್ಷೇಪ ಸಲ್ಲಿಸಿದರು.20150101_173819

ಸಹಾಯಕ ಕಾರ್ಯಪಾಲ ಇಂಜಿನೀಯರ್-೨ ಮತ್ತು ತನಿಖಾಧಿಕಾರಿಯಾದ ಸುದೀಂದ್ರ ಅವರು ರಸ್ತೆಯನ್ನು ಸಂಪೂರ್ಣ ಪರಿಶೀಲಿಸಿ ಬಳಿಕ  ತನಿಖಾವರದಿ ಸಿದ್ದಪಡಿಸಿದ್ದರು.ಈ ವರದಿ ಸಮರ್ಪಕಮತ್ತು ತ್ರಪ್ತಿಕರವಾಗಿಲ್ಲ ಎಂದು ದೂರುದಾರ ಗೋವಿಂದ ಪ್ರಭುರವರು ಲಿಖಿತ ಅಕ್ಷೇಪ ದಾಖಲಿಸಿದರು. ಹಾಗೆಯೇ ದೂರಿನ ತನಿಖಾ ಹಂತದಲ್ಲಿರುವಾಗ ಮತ್ತು ಈರಸ್ತೆ ನಿರ್ಮಾಣದ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವುದರಿಂದ ಗುತ್ತಿಗೆದಾರನ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲು ಈಹಿಂದೆ ನಡೆದ ತನಿಖೆಯ ಬಳಿಕ ಲೋಕಾಯುಕ್ತ ಕಚೇರಿಯಿಂದಲೇ ಶಿಫಾರಸ್ಸು ಮಾಡಿದ್ದರೂ ಪುರಸಭೆಯಿಂದ ಗುತ್ತಿಗೆದಾರನಿಗೆ ಕಾಮಗಾರಿಯ ಪೂರ್ತಿಬಿಲ್ಲು ಪಾವತಿಸಿರುವ ವಿಚಾರವನ್ನು ತನಿಖಾಧಿಕಾರಿಯವರ ಗಮನಸೆಳದರು.ಈಪ್ರಕರಣ ತನಿಖೆಯ ಹಿನ್ನಲೆಯಲ್ಲಿ ಮಂಗಳೂರಿನಲ್ಲಿರುವ ಯೋಜನಾ ನಿರ್ದೇಶಕರ ಕಚೇರಿಗೆ ಬರುವಂತೆ ಸೂಚನಾಪತ್ರ ನೀಡಿ ಈಗ ಏಕಾಏಕಿ ಸ್ಥಳಕ್ಕೆ ಬರಲು ಸೂಚಿಸುವ ಮೂಲಕ ಉದ್ದೇಶಪೂರ್ವಕ ಎಂಬಂತೆ ತನ್ನನ್ನು ದಾರಿ ತಪ್ಪಿಸಲು ಅಧಿಕಾರಿಗಳು ಯತ್ನಿಸಲಾಗಿದೆ ಎಂದು ಪ್ರಭು ಆರೋಪಿಸಿದರು.ತನಿಖಾಧಿಕಾರಿ ಸುದೀಂದ್ರ ಅವರು ಈಬಗ್ಗೆ ಮುಖ್ಯಾಧಿಕಾರಿಯನ್ನು ಪ್ರಶ್ಙಿಸಿದಾಗ ಎರಡನೇ ನೊಟೀಸ್ ಜಾರಿ ಮಾಡಿರುವ ಕುರಿತ ದಾಖಲೆಯನ್ನು ತನಿಖಾಧಿಕಾರಿಗೆ ಹಾಜರುಪಡಿಸಿದರು.ಅದರಲ್ಲಿದ್ದ ಸಹಿ ತನ್ನದು ಅಲ್ಲ.20150101_180406

ತನ್ನ ಮನೆಯ ಸದಸ್ಯರದ್ದು ಅಲ್ಲ ಎಂದು ವಾದಿಸಿದರು.ಇದು ತನಿಖಾಧಿಕಾರಿ ಹಾಗೂ ಇತರರನ್ನು ಮುಜಗರಕ್ಕೀಡು ಮಾಡಿತು.  ದೂರಿಗೆ ತಕ್ಕಂತೆ  ತನಿಖೆಯಾಗಿಲ್ಲ ; ಮೂಲ ಅಂದಾಜುಪಟ್ಟಿ,ನಕ್ಷೆಯಂತೆ ಈ ರಸ್ತೆ ನಿರ್ಮಾಣವಾಗಿಲ್ಲ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೆವು ಆದರೆ ಗುರುವಾರ ಬಂದ ತನಿಖಾಧಿಕಾರಿ ನಮ್ಮ ದೂರಿಗೆ ತಕ್ಕಂತೆ ತನಿಖೆ ನಡೆಸಿಲ್ಲ,ಅವರಿಗೆ ಬೇಕಾದಂತೆ ಯಾರನ್ನೊ ಬಚಾವ್ ಮಾಡುವಂತೆ ವರದಿ ತಯಾರಿಸಲಾಗಿದ್ದು ,ಅದಕ್ಕೆ ಅಕ್ಷೇಪ ದಾಖಲಿಸಿದ್ದೇನೆ ಎಂದು ದೂರುದಾರ ಗೋವಿಂದ ಪ್ರಭು ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.ಈ ನಡುವೆ ತನಿಖಾ ಹಂತದಲ್ಲಿರುವಾಗ ಪುರಸಭೆ ಗುತ್ತಿಗೆದಾರನಿಗೆ ಕಾಮಗಾರಿಯ ಪೂರ್ತಿ ಬಿಲ್ಲು ಪಾವತಿಸಿರುವುದನ್ನು ಗಮನಕ್ಕೆ ತರಲಾಗಿದ್ದು,ಈಬಗ್ಗೆ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ,ಈ ಪ್ರಕರಣ ದಡ ಮುಟ್ಟವವರೆಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಪ್ರಭು ತಿಳಿಸಿದ್ದಾರೆ.ಈಸಂದರ್ಭದಲ್ಲಿ ಸ್ಥಳೀಯ ಸದಸ್ಯೆ ಸುಗುಣ ಕಿಣಿ ಹಾಜರಿದ್ದರು.ತನಿಖೆಯ ವೇಳೆ ಮುಖ್ಯಾಧಿಕಾರಿ ಸುಧಾಕರ್,ಶ್ರೀಧರ್,ಡೊಮೆನಿಕ್ ಡಿಮೆಲ್ಲೊ ಮೊದಲಾದವರಿದ್ದರು. ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಈರಸ್ತೆ ನಿರ್ಮಾಣಗೊಂಡಿತ್ತು.ಈ ರಸ್ತೆ ಮೂಲ ಅಂದಾಜುಪಟ್ಟಿಯಂತೆ ನಿರ್ಮಾಣವಾಗಿಲ್ಲ ಮತ್ತು ಕಳಪೆಗುಣ ಮಟ್ಟದಿಂದ ಕೂಡಿದೆ ಎಂದು 2014 ರ ನವಂಬರ್ 19 ರಂದು ಗೋವಿಂದ ಪ್ರಭು ಅವರು ಲೋಕಾಯುಕ್ತದ ಮುಂದೆ ದೂರು ದಾಖಲಿಸಿದ್ದರು.ಇನ್ನೂ ಕೂಡ ಈಪ್ರಕರಣ ತನಿಖಾ ಹಂತದಲ್ಲೆ ಇದೆ.

By suddi9

Leave a Reply

Your email address will not be published. Required fields are marked *