ಬಂಟ್ವಾಳ:ಚೇಳೂರು ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಸಹಾಯಕ ಉಪನಿಬಂಧಕರ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಙೆ ನೀಡಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಬಂಗೇರ ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಂಘದ ಮಾಜಿ ಅಧ್ಯಕ್ಷ ವಿನ್ಸೆಂಟ್ ಸಲ್ದಾನ ಅವರು ಸಹಾಯಕ ನಿಬಂಧಕರ ಆದೇಶವನ್ನು ಹೈಕೋಟ್೯ನಲ್ಲಿ ಪ್ರಶ್ನಿಸಿದ್ದರೆಂದು ಹೇಳಿದರು. 2011ರ ದಶಂಬರ್ ತಿಂಗಳಲ್ಲಿ ನಡೆದ ಸಂಘದ ದಶಮಾನೋತ್ಸವ ಆಚರಣೆಗೆ ಹಿಂದಿನ ಆಡಳಿತ ಮಂಡಳಿ ಸಹಕಾರಿ ಸಂಘದ ನಿಬಂಧಕರ ಅನುಮತಿ ಪಡೆಯದೆ ಹೆಚ್ಚುವರಿಯಾಗಿ ಹಣ ಖರ್ಚು ಮಾಡಲಾಗಿದೆ ಎಂದು ಆರೋಪಿಸಿ ಸಂಘದ ಸದಸ್ಯ ಹರಿಪ್ರಸಾದ್ ರೈ ಎಂಬವರು ದೂರು ಸಲ್ಲಿಸಿದ್ದರು.
ಈಬಗ್ಗೆ ಸಹಕಾರಿ ನಿಬಂಧಕರು ಹೆಚ್ಚುವರಿ ಖರ್ಚಾದ ಹಣವನ್ನು ಹಿಂದಿನ ಆಡಳಿತ ಮಂಡಳಿಯಿಂದ ವಸೂಲು ಮಾಡುವಂತೆ ಆದೇಶಿಸಿ ದ್ದರು.ಆದರೆ ಪ್ರಸಕ್ತ ಆಡಳಿತ ಮಂಡಳಿಯು ವಸೂಲಾತಿ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆದೇಶಿಸಿತ್ತು.ಎಂದು ವಿವರಿಸಿದರು. ದಶಮಾನೋತ್ಸವ ಸಮಾರಂಭಕ್ಕೆ ಒಂದು ಲಕ್ಷ ಹಣವನ್ನು ಬಜೆಟ್ ನಲ್ಲಿಯೇ ಕಾದಿರಿಸಲಾಗಿತ್ತಲ್ಲದೆ ಮಹಾಸಭೆಯಲ್ಲೂ ಅನುಮತಿ ಪಡೆಯಲಾಗಿತ್ತು.ದಶಮಾನೋತ್ಸವದಲ್ಲಿ ಖರ್ಚಾಗಿ ಉಳಿಕೆ ಹಣದಿಂದ ಕೆಲವೊಂದು ಕಾಮಗಾರಿಯನ್ನು ನಡೆಸಲಾಗಿತ್ತು ಈಸಂಬಂಧ ಎಲ್ಲ ದಾಖಲೆಯನ್ನು ನೀಡಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಜಿ ಅಧ್ಯಕ್ಷ ವಿನ್ಸೆಂಟ್ ಸಲ್ದಾನ ಅವರು,ಸಹಾಯಕ ನಿಬಂಧಕರ ಈ ಆದೇಶ ಕಾನೂನು ಬಾಹಿರ ಮತ್ತು ಏಕಪಕ್ಷೀಯಎಂದು ಹೈಕೋಟ್೯ನಲ್ಲಿ ಪ್ರಶ್ನಿಸಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಅವರ ಆದೇಶಕ್ಕೆ ತಡೆಯಾಜ್ಙೆ ನೀಡಿದೆ ಎಂದರು.
ಲಾಭದಲ್ಲಿದೆ:
ಸಂಘವು ಪ್ರಸಕ್ತ ಐದೂವರೆ ಲಕ್ಷ ರೂ.ಲಾಭದಲ್ಲಿದ್ದು,ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಟ್ ನೀಡಲಾಗಿದೆ ಸಂಘಕ್ಕೆ ಹಾಲು ಹಾಕುವ ಸದಸ್ಯರಿಗೆ ಬೋನಸ್ ,ಪ್ರೋತ್ಸಾಹ ಕ ಬಹುಮಾನವನ್ನು ನೀಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ವಾಯಿಲೆಟ್,ನಿರ್ದೇಶಕ ಪೆಡ್ರಿಕ್ ಡಿಸೋಜರವರು ಹಾಜರಿದ್ದರು.