ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಬಂಟ್ವಾಳ ಹಾಗೂ ಗ್ರಾಮ ಪಂಚಾಯತ್ ಪಂಜಿಕಲ್ಲು ಇದರ ವತಿಯಿಂದ ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆಯ ಕಾರ್ಯಕ್ರಮ ಕರೆಂಕಿ ಜಿನ್ನಪ್ಪರವರ ಕೃಷಿ ತಾಕಿನಲ್ಲಿ ನಡೆಯಿತು.ಕಾರ್ಯಕ್ರದ ಅಧ್ಯಕ್ಷತೆಯನ್ನು ಬಿ.ಸಿ.ರೋಡ್ ವಲಯಧ್ಯಕ್ಷ ಪುರುಷೊತ್ತಮ ಪೂಜಾರಿಯವರು ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳತಾಲೂಕಿನಯೋಜನಾಧಿಕಾರಿ ಸುನೀತಾ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಜಲಾನಯನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಶ್ರೀ ಕ್ಷೇಧಗ್ರಾಯೋ ಬಂಟ್ವಾಳತಾಲೂಕಿನ ಕೃಷಿ ಅಧಿಕಾರಿ ನಾರಾಯಣ ಕೆ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭೂಮಿಗೆ ಮಳೆ ನೀರನ್ನು ಇಂಗಿಸುವ ವಿಧಾನಗಳಾದ ಇಂಗು ಗುಂಡಿ, ಮಳೆ ಕೊಯ್ಲು, ಕೃಷಿ ಹೊಂಡ ಹಾಗೂ ಕೊಳವೆ ಬಾವಿ ಮರುಪೂರಣಗಳ ಬಗ್ಗೆ ಮಾಹಿತಿ ನೀಡಿದರು.IMG-20170714-WA0014
ಜೀವಜಲ ಸಂರಕ್ಷಣೆ ಬಹಳ ಅಗತ್ಯತೆಯಿದೆ ನಾವೆಲ್ಲರೂ ಭೂಮಿಗೆ ನೀರಿಂಗಿಸುವ ಮೂಲಕ ಜಲ ಸಂರಕ್ಷಣೆ ಮಾಡಬೇಕೆಂದರು.ನಂತರ ಕೊಳವೆ ಬಾವಿ ಮರುಪೂರಣ ಪ್ರಾತ್ಯಾಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು.ಪಂಜಿಕಲ್ಲುಗ್ರಾಮ ಪಂಚಾಯತ್ ಸದಸ್ಯರಾದ ಪೂವಪ್ಪ ಮೆಂಡನ್‍ರವರು ಮುಖ್ಯಅತಿಥಿಯಾಗಿ ಆಗಮಿಸಿ ಪಂಚಾಯತ್‍ನಿಂದರೈತರಿಗೆದೊರಕುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.ಪ್ರಗತಿಪರಕೃಷಿಕರಾದಜಿನ್ನಪ್ಪ ಪೂಜಾರಿಯವರು ಅನಿಸಿಕೆಯನ್ನು ಹಂಚಿಕೊಂಡರು.ಸೇವಾಪ್ರತಿನಿಧಿಯಾದಆನಂದರವರುಕಾರ್ಯಕ್ರಮಕ್ಕೆ ಸ್ವಾಗತಿಸಿ ಸೇವಾಪ್ರತಿನಿಧಿ ಶ್ರೀಮತಿ ರೂಪಾಶ್ರೀರವರು ಧನ್ಯವಾದಗೈದರು.ಬಿ.ಸಿ ರೋಡ್ ವಲಯದ ಮೇಲ್ವಿಚಾರಕರಮೇಶರವರುಕಾರ್ಯಕ್ರಮ ನಿರೂಪಿಸಿದರು.IMG-20170714-WA0013 (1)

By suddi9

Leave a Reply

Your email address will not be published. Required fields are marked *