ಬಂಟ್ವಾಳ: ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಅನಧಿಕ್ರತ ಈಜುಕೊಳ ಕಾಣಿಸಿಕೊಂಡಿದೆ ! ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಿ.ಸಿ.ರೋಡಿನ ಟೆಲಿಕಾಂ ಕಚೇರಿ ಮುಂಭಾಗ ಕಂಡುಬರುತ್ತಿರುವ ದ್ರಶ್ಯ .ಸರ್ವಿಸ್ ರಸ್ತೆಯ ಒಂದು ಬದಿಯಲ್ಲಿ ಕಾಂಕ್ರೇಟ್ ಚರಂಡಿ ಕಾಮಗಾರಿ ನಡೆಯುತ್ತಿದ್ದು,,ಈ ಚರಂಡಿ ರಸ್ತೆಗಿಂತ ಎತ್ತರವಾಗಿದ್ದರಿಂದ ಮಳೆನೀರು ಹರಿಯಲಾಗದೆ ರಸ್ತೆಯಲ್ಲೆ ಶೇಖರಣೆಯಾಗಿದೆ.ಹಾಗೆ ಚರಂಡಿ ಕೊರೆದ ಮಣ್ಣನ್ನು ಕೂಡ ರಸ್ತೆ ಮೇಲೆಯೇ ಹಾಕಲಾಗಿದ್ದರಿಂದ ಮಣ್ಣು ಮಳೆ ನೀರಿನಲ್ಲಿ ಮಿಶ್ರಣವಾಗಿ ಸಾರ್ವಜನಿಕರು ನಡೆದಾಡಲು ತೊಂದರೆ ಪಡುವಂತಾಗಿದೆ.ಈ ಕೆಸರು ನೀರಿನಲ್ಲೆ ಓಡಾಡುತ್ತಿದ್ದಾರ.IMG-20170715-WA0062

IMG-20170715-WA0068

ಪುತ್ತೂರು,.ಧರ್ಮಸ್ಥಳ ಮೊದಲಾದ ಊರುಗಳಿಂದ ಮಂಗಳೂರಿಗೆ ತೆರಳುವ ಬಸ್ ಗಳು ಕೂಡ ಇಲ್ಲೆ ಪ್ರಯಾಣಿಕರನ್ನು ಇಳಿಸಿ ಹತ್ತಿಸಲಾಗುತ್ತಿದೆ. ಈ ಕೆಸರು ನೀರಿನಲ್ಲೆ ಬಸ್ ಗಳು ನಿಲುಗಡೆಯಾಗುತ್ತಿದ್ದು,ಪ್ರಯಾಣಿಕರು ಇದೇ ಅನಧಿಕ್ರತ ಕೊಳದಲ್ಲಿ ಮುಳುಗಿಕೊಂಡೆ ಬಸ್ ಹತ್ತಿ ಇಳಿಯಬೇಕಾಗಿದೆ. ಸರ್ವಿಸ್ ರಸ್ತೆ ಈಗಾಗಲೇ ಹದಗೆಟ್ಟು ಸಂಚಾರಕ್ಕೆ ಆಯೋಗ್ಯವಾಗಿದ್ದು,ಇದೀಗ ಚರಂಡಿ ಕಾಮಗಾರಿ ಮತ್ತೊಂದು ಅಧ್ವಾನವನ್ನುಂಟು ಮಾಡಿದೆ.ರಾಜ್ಯಪೊಲೀಸ್ ಮಹಾನಿರ್ದೇಶಕರ ಅಗಮನದ ಹಿನ್ನಲೆಯಲ್ಲಿ ಶುಕ್ರವಾರ ಸರ್ವಿಸ್ ರಸ್ತೆಯ ಅರ್ಧಭಾಗದ. ಗುಂಡಿಯನ್ನು ಪುರಸಭೆ ತೇಪೆಹಾಕಿ ಮುಚ್ಚಿತ್ತು.ಈವಿದ್ಯಾಮಾನ ಸಾರ್ವಜನಿಕರಿಂ ವ್ಯಾಪಕ ಟೀಕೆಗೊಳಗಾಗಿತ್ತು.

 

By suddi9

Leave a Reply

Your email address will not be published. Required fields are marked *