ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲಾಘಟಕದ ಆಶ್ರಯದಲ್ಲಿ ಕಾಲೇಜು ವಿಭಾಗದ ಶೈಕ್ಷಣಿಕ ಸಹಮಿಲನ ದಿನಾಂಕ 15.07.2017ರಂದು ಶ್ರೀರಾಮ ಪದವಿ ಪೂರ್ವ ವಿಭಾಗದ ಅಜಿತಕುಮಾರ್ ಸಭಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್‍ನ ವಿರೋಧ ಪಕ್ಷದ ಸಚೇತಕರಾಗಿರುವ ಕ್ಯಾ. ಗಣೇಶ್‍ಕಾರ್ಣಿಕ್‍ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ರಾಷ್ಟ್ರದ ಮಾನ ಸನ್ಮಾನದ, ಗೌರವದ ಜವಾಬ್ಧಾರಿ ಶಿಕ್ಷಕರದ್ದು ಎಂದರಲ್ಲದೆ ಭಾರತಎದುರಿಸುತ್ತಿರುವಎಲ್ಲಾ ಸವಾಲುಗಳಿಗೆ ಶಿಕ್ಷಣದಲ್ಲಿ ಭಾರತೀಯತೆ ಪರಿಹಾರವಾಗಬಲ್ಲದುಎಂದುಅಭಿಪ್ರಾಯಪಟ್ಟರು.ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ ಸ್ವಾಗತಿಸಿ, ಪ್ರಸ್ತಾವನೆಗೈದು ವಿದ್ಯಾಭಾರತೀಯ ಮೂಲ ನಂಬಿಕೆ, ಧ್ಯೇಯ ಉದ್ದೇಶಗಳ ಈಡೇರಿಕೆಗೆ ಮೂಲಭೂತ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಭಾರತದ ರಾಷ್ಟ್ರೀಯ ಸುರಕ್ಷತೆಗೆ ಚೀನಾದ ಸವಾಲುಗಳು ಎಂಬ ವಿಷಯದ ಬಗ್ಗೆ ಶ್ರೀ ಪ್ರದೀಪ ಮೈಸೂರುರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಪ್ರಚಾರ ಪ್ರಮುಖ್‍ಇವರುವಿಶೇಷ ಉಪನ್ಯಾಸ ನೀಡಿದರು.ಚೀನಾದಿಂದ ಆಗುವ ಅಪಾಯ ಮತ್ತುಪರಮ ಶತ್ರುವಾಗಿ ಬೆಳೆಯುತ್ತಿರುವುದಕ್ಕೆ ನಮ್ಮದೇಆರ್ಥಿಕಪ್ರೋತ್ಸಾಹವೇಕಾರಣಎಂಬುದನ್ನುಮನಗಾಣಬೇಕಾಗಿದೆಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಉಪಸ್ಥಿತರಿದ್ದರು.ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷ ನಾರಾಯಣ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಯತಿರಾಜ್‍ ಕಾರ್ಯಕ್ರಮವನ್ನು ನಿರ್ವDSCN6825ಹಿಸಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ವಸಂತ ಬಲ್ಲಾಳ ಇವರು ವಂದಿಸಿದರು.

By suddi9

Leave a Reply

Your email address will not be published. Required fields are marked *