ಬಂಟ್ವಾಳ : ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ,ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಮುಖಂಡರು ಶನಿವಾರ ಮಧ್ಯಾಹ್ನ ಅನಂತಾಡಿಯ ದಲಿತರೊಬ್ಬರ ಮನೆಯಲ್ಲಿ ಭೋಜನ ಸವಿದರು.ಅನಂತಾಡಿ ಗ್ರಾಮದ ದೇವಿನಗರ ಪರಿಶಿಷ್ಠ ಜಾತಿ ಕಾಲೋನಿ ನಿವಾಸಿ ಸಂಜೀವ ಅವರ ನಿವಾಸದಲ್ಲಿ ಭೋಜನ ಸ್ವೀಕರಿಸಿದರು.IMG-20170715-WA0052

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್,ಮಾಜಿ ಶಾಸಕರಾದ ರುಕ್ಮಯ ಪೂಜಾರಿ ,ಪದ್ಮನಾಭ ಕೊಟ್ಟಾರಿ ,ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು,ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ , ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ,ಮುಖಂಡರಾದ ದೇವದಾಸ ಶೆಟ್ಟಿ,ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ, ಕ್ರಷ್ಣಪ್ಪ ಪೂಜಾರಿ ಕಲ್ಲಡ್ಕ,ದಿನೇಶ್ ಅಮ್ಟೂರು,ರಮಾನಾಥ ರಾಯಿ,ಸೀತಾರಾಮಪೂಜಾರಿ,ಗಣೇಶ್ಬರೈ ಮಾಣಿ ಮೊದಲಾದವರಿದ್ದರು.IMG-20170715-WA0051

ಇದಕ್ಕೂ ಮೊದಲು ಬಿಜೆಪಿ ಮಾಣಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಭವನದಲ್ಲಿ ನಡೆಯಿತು.ಮಧಾಹ್ನ ಕೊಳ್ನಾಡು ಶಕ್ತಿಕೇಂದ್ರ ಕಾರ್ಯಕರ್ತರ ಸಭೆ ನಡೆಯಿತು.ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ,ಸಂಸದ ನಳಿನ್ ಕುಮಾರ್ ಕಟೀಲ್,ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ದೇವದಾಸ ಶೆಟ್ಟಿ ಮೊದಲಾದ ನಾಯಕರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *