ಬಂಟ್ವಾಳ :  ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ 108 ಮುನಿಶ್ರೀ ವೀರ ಸಾಗರ ಮಹಾರಾಜರ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸ ಆಚರಣೆಯ  ಪ್ರಯುಕ್ತ ಮುನಿಶ್ರೀಗಳ  ಶ್ರೀ ಭಕ್ತಾಮರ ಆರಾಧನೆ ಹಾಗೂ  ಮಂಗಲಪ್ರವಚನ ನಡೆಯಿತು.   ಮಂಗಳೂರಿನ  ಇಂದಿರಾ ದೇವಿಯಮ್ಮ ಮತ್ತು ಮಕ್ಕಳು, ರಾಜಗೃಹ ಇವರ ವತಿಯಿಂದ ಶ್ರೀ ಭಕ್ತಾಮರ ಆರಾಧನೆಯು ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು.
04
ಈ ಸಂದರ್ಭದಲ್ಲಿ  ಮಂಗಲ ಪ್ರವಚನಗೈದ ಮುನಿಶ್ರೀ ವೀರ ಸಾಗರ ಮಹಾರಾಜರು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯಗಳನ್ನು ನಿಷ್ಠೆಯಿಂದ ಪಾಲನೆ ಮಾಡಿದಾಗ ಪ್ರತಿಯೊಬ್ಬ ಶ್ರಾವಕನೂ ಮಿತ್ಯಾತ್ವ ಹಾದಿ ತೊರೆದು, ಧರ್ಮ ಸಂಸ್ಕಾರ ಪಡೆದು ಮೋಕ್ಷ ಮಾರ್ಗದಲ್ಲಿ ಸಾಗಬಹುದು ಎಂದು  ತಿಳಿಸಿದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ ಶ್ರಾವಕ ಬಂಧುಗಳ ಧಾರ್ಮಿಕ ಪ್ರಶ್ನೆಗಳಿಗೆ  ಮುನಿಶ್ರೀ  ಉತ್ತರಿಸಿದರು.
ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಪುತ್ತೂರು, ಕಾರ್ಕಳ, ಕಳಸ, ಸಂಸೆ ಮೊದಲಾದೆಡೆಯಿಂದ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.  ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್,  ಅನಿತಾ ಸುರೇಂದ್ರ ಕುಮಾರ್,  ಡಿ. ರಾಜೇಂದ್ರ ಕುಮಾರ್  ಡಾ|ನೀತಾ ರಾಜೇಂದ್ರ ಕುಮಾರ್, ಮಂಜುಳಾ ಅಭಯಚಂದ್ರ ಜೈನ್ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಚಾತುರ್ಮಾಸ ಸಮಿತಿಯ  ರತ್ನಾಕರ್ ಜೈನ್ ಮಂಗಳೂರು,  ಸುದರ್ಶನ್ ಜೈನ್ ಪಂಜಿಕಲ್ಲು,  ಸಂಪತ್ ಕುಮಾರ್ ಶೆಟ್ಟಿ,  ಧರಣೇಂದ್ರ ಇಂದ್ರ,  ಸುಭಾಶ್ಚಂದ್ರ ಜೈನ್,ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್,  ದೀಪಕ್ ಇಂದ್ರ, ಆದಿರಾಜ್ ಜೈನ್, ಭರತ್ ರಾಜ್ ಜೈನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *