ವಿಟ್ಲ: ವೀರಕಂಬ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ವೀರಕಂಬ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಡಿಯೂರು ಗ್ರಾಮವಿಕಾಸ ಯೋಜನೆ ವೀರಕಂಬ, ರೋಟರಿ ಕ್ಲಬ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಉಡುಪಿ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ಸಹಕಾರದಲ್ಲಿ ಆಟಿಡೊಂಜಿ ಕೂಟ, ವಸ್ತು ಪ್ರದರ್ಶನ, ತುಳುನಾಡಿ ಖಾದ್ಯ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.4

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ಮಾವೆ ಉದ್ಘಾಟಿಸಿ ಮಾತನಾಡಿ ತುಳುನಾಡಿ ಮಕ್ಕಳಲ್ಲಿ ತುಳು ಸಂಸ್ಕøತಿಗಳನ್ನು ಬೆಳೆಸುವುದು ಹೆತ್ತವರ ಕರ್ತವ್ಯವಾಗಿದೆ. ತುಳುನಾಡಿನ ಆಹಾರ ಪದ್ಧತೆಯಲ್ಲಿ ಔಷಧಿಯ ಗುಣಗಳಿವೆ. ತುಳುನಾಡಿನ ಸಂಸ್ಕøತಿ ಪದ್ಧತಿಗಳನ್ನು ಇಂತಹ ಕಾರ್ಯಕ್ರಮ ಮೂಲಕ ಉಳಿಸಲು ಸಾಧ್ಯವಿದೆ. ಯುವಶಕ್ತಿಗಳು ಮಾದಕ ದ್ರವ್ಯ ಹಾಗೂ ಸಾಮಾಜಿಕ ಜಾಲತಾಣದಿಂದ ದಾರಿತಪ್ಪುತ್ತಿದ್ದಾರೆ. ಹೆತ್ತವರು ಮಕ್ಕಳಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸಂಜೀವ ಅಧ್ಯಕ್ಷತೆ ವಹಿಸಿದ್ದರು.3

ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ಚಂದ್ರಶೇಖರ್, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ರೇಹ್ಮಾನ್ ಡಿ ಕುನ್ಹಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ನಾರಾಯಣ ಗೌಡ, ಒಡಿಯೂರು ಗ್ರಾಮವಿಕಾಸ ಯೋಜನೆಯ ವಿಸ್ತಣಾಧಿಕಾರಿ ಸದಾಶಿವ ಅಳಿಕೆ, ಪೋಟೋ ಗ್ರಾಫರ್ಸ್ ಅಸೋಶಿಯೇಶನ್‍ನ ಜಯರಾಮ ರೈ, ಬಂಟ್ವಾಳ ಒಕ್ಕೂಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಯಾಸೀರ್ ಕಲ್ಲಡ್ಕ ಅವರ ನೇತೃತ್ವದಲ್ಲಿ ನೂರು ವರ್ಷಗಳ ಹಿಂದಿನ ಹಳೆಕಾಲದ ಕೃಷಿ ಮತ್ತು ಮನೆ ಸಾಮಾಗ್ರಿಗಳಾದ ಮರದ, ಮಣ್ಣಿನ, ತಾಮ್ರದ ಪಾತ್ರೆಗಳ ಪ್ರದರ್ಶನ, ಹಾಗೂ ನೂತನ 60, 150, 100, 1000, ನಾಣ್ಯಗಳ ಪ್ರದರ್ಶನವು ನಡೆಯಿತು. ಅದಲ್ಲದೇ ಮೊತ್ತ ಮೊದಲ ಹಂಚು ಎಲ್ಲರ ಗಮನ ಸೆಳೆದಿದೆ.1

ಶಾಲಾ ವಿದ್ಯಾರ್ಥಿಗಳ ಮನೆಯಲ್ಲಿ ತಯಾರಿಸಲಾದ ಪತ್ರೋಡೆ, ಹಲಸಿನ ಪಲ್ಯ, ಉರುಳಿ ಚಟ್ನಿ, ಅರಸಿನ ಎಳೆ ಗಟ್ಟಿ, ಆಟಿ ಪೊರಿ ಮೊದಲಾದ ತುಳುನಾಡಿನ ಖಾದ್ಯಗಳ ಪ್ರದರ್ಶನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಆಟಿ ತಿಂಗಳ ಕೆಲವು ನೃತ್ಯಗಳು ನಡೆಯಿತು. ಊರಿನ ಹಿರಿಯ ಮಹಿಳೆಯರು ತುಳುನಾಡಿನ ಕವಿತೆಗಳನ್ನು ಹಾಡಿ ಮನರಂಜಿಸಿದರು.
ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಸಂಗೀತ ಶರ್ಮ ನಿರೂಪಿಸಿದರು. ಸುನೀಲ್ ವಂದಿಸಿದರು.

By suddi9

Leave a Reply

Your email address will not be published. Required fields are marked *