ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲ ಯೋಜನೆಯಡಿ ಮಂಜೂರಾದ ಉಚಿತ ಅಡುಗೆ ಅನಿಲ ಮತ್ತು ಸ್ಟೌವನ್ನು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಬುಧವಾರ ವಿತರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್, ಪ್ರಮುಖರಾದ ಎಂ.ದುರ್ಗಾದಾಸ್ ಶೆಟ್ಟಿ, ನಿರುಪಮಾ ಎಸ್.ಭಂಡಾರಿ, ಇಂದಿರಾ ಮಧುಕರ ಬಂಗೇರ, ಕುಸುಮ, ಸಂತೋಷ್ ಕುಮಾರ್ ಬೆಟ್ಟು, ಹರೀಶ ಆಚಾರ್ಯ, ರಾಘವ ಅಮೀನ್, ಪದ್ಮನಾಭ ಗೌಡ, ವಿತರಕ ಪ್ರಭಾಕರ ಶೆಟ್ಟಿ ಮತ್ತಿತರರು ಇದ್ದರು.9btl-Rayee

By suddi9

Leave a Reply

Your email address will not be published. Required fields are marked *