ಬಂಟ್ವಾಳ : ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮುಕಾಂಬಿಕ ದೇವಾಲಯದಿಂದ ದತ್ತು ಯೋಜನೆಯಡಿ ನೀಡಲಾಗುತ್ತಿದ್ದ ಅನದಾನವನ್ನು ರದ್ದುಗೊಳಿಸಿರುವ ಸರಕಾರದ ನಿಲುವನ್ನು ಖಂಡಿಸಿ ವಿದ್ಯಾರ್ಥಿಗಳ ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗ ಬಟ್ಟಲು ಹಿಡಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳಿಗೆ ಪೋಷಕರು ,ವಿವಿಧ ಸಂಘಟನೆಯ ಮುಖಂಡರು ಸಾಥ್ ನೀಡಿದರು.

19ವಿವಿಧ ತರಗತಿಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಶಿಸಿ ಮಾತನಾಡಿ ಸಿದ್ದರಾಮಯ್ಯ ಸರಕಾರದ ಈ ಧೋರಣೆಯನ್ನು ಖಂಡಿಸಿದರು.ಒಂದು ಹಂತದಲ್ಲಿ ಸಿಎಂ ಸಿದ್ದರಾಮಯ್ಯ,ಜಿಲ್ಲಾ ಉಸ್ತುವಾರಿ ಸಚಿವರಮಾನಾಥ ರೈ ಅವರ ವಿರುದ್ದ ದಿಕ್ಕಾರ ಕೂಗಿದರು.ತಮ್ಮ ಕಿಸೆಯ ಹಣದಿಂದ ಕೊಲ್ಲೂರು ದೇವಳ ಅನ್ನ ನೀಡುತ್ತಿಲ್ಲ,ಭಕ್ತರು ಹಾಕಿದ ಹಣದಿಂದ ಅನ್ನ ನೀಡುತ್ತಿದೆ.

6ರಾಜಕೀಯ ದ್ವೇಷಕ್ಕಾಗಿ ಅನುದಾನವನ್ನು ರದ್ದುಗೊಳಿಸಿ ನಮ್ಮ ಒಂದು ಹೊತ್ತಿ ತತ್ತು ಅನ್ನಕ್ಕೆ ಮಣ್ಣ ಹಾಕಿದ ನಿಮಗೆ ನಮ್ಮ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅನದಾನ ರದ್ದು ಆದೇಶವನ್ನು ಕೂಡಲೇ ವಾಪಾಸು ಪಡೆದು ಮುಕಾಂಬಿಕೆ ಅನ್ನ ಪ್ರಸಾದ ಮತ್ತೆ ಮುಂದುವರಿಯಬೇಕು ಇಲ್ಲದಿದ್ದಲ್ಲಿ ಮುಂದಿನ ವಿದ್ಯಾರ್ಥಿಶಕ್ತಿ ಎನೆಂಬುದನ್ನು ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತೊಇರಿಸುತ್ತವೆ ಎಂದು ಎಚ್ಚರಿಸಿದರು.ಶಾಲಾ ಅಧ್ಯಾಪಕ,ಅದ್ಯಾಪಿಕಿಯರು ಹಾಜರಿದ್ದರು.ಸುಮಾರು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಕೊನೆಗೆ ತಹಶೀಲ್ದರರ ಮೂಲಕ ಮನವಿ ಸಲ್ಲಿಸಲಾಯಿತು.ಬಿಗು ಪೊಲೀಸ್ ಬಂದೋಬಸ್ತು ಎರ್ಪಡಿಸಲಾಗಿತ್ತು.

5 9 21 20170811_104650 20170811_104655

* ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

 https://youtu.be/DDCV_Wfhw5I

By suddi9

Leave a Reply

Your email address will not be published. Required fields are marked *