ಬಂಟ್ವಾಳ:ಕಾವಳಪಡೂರು ಗ್ರಾಮದ ಅಂಚಿಕಟ್ಟೆ ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು ೧.೭೪ ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಶುಕ್ರವಾರ ಹಾಡುಹಗಲೇ ಮಧ್ಯಾಹ್ನದ ಹೊತ್ತಿಗೆ ನಡೆದಿದದ್ದು , ಈ ಕ್ರತ್ಯದಲ್ಲಿ ಭಾಗಿಯಾಗಿದ್ದಾರೆನ್ನಲಾದ ಮೂವರ ಪೈಕಿ ಒರ್ವನನ್ನು ಅಜಿಲಮಾಗರು ಮಸೀದಿ ಬಳಿ ಸ್ಥಳೀಯರು ಹಿಡಿದು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.ಇಲ್ಲಿನ ಕೇಶವ ಪೂಜಾರಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.ಇವರ ಪತ್ನಿ ಭಾರತಿ ಅವರು ಮಧ್ಯಾಹ್ನ ಮೂರುಗಂಟೆಗೆ ಸ್ತ್ರಿಶಕ್ತಿ ಗುಂಪಿನ ಮೀಟಿಂಗ್ ಗೆಂದು ತೆರಳಿದ್ದರೆನ್ನಲಾಗಿದೆ.ಅವರು ವಾಪಾಸು ಬರುತ್ತಿದ್ದಾಗ ಮನೆಯ ಪಕ್ಕದಿಂದ ಮೂವರು ಅಪರಿಚಿತರು ಓಡುವಿದನ್ನು ಗಮನಿಸಿದ್ದರು.ಅನುಮಾನಗೊಂಡ ಅವರು ಮನೆಯೊಳಗೆ ಪ್ರವೇಶಿಸಿದಾಗ ಕಪಾಟಿನ ಬಾಗಿಲನ್ನು ಒಡೆದು ಅದರಲ್ಲಿದ್ದ ಹನ್ನೆರಡು ಪವನು ಚಿನ್ನಾಭರಣವನ್ನು ದೋಚಿರುವುದು ಕಂಡುಬಂದಿದೆ.ಕಳ್ಳರು ಬೈಕ್ ನಲ್ಲಿ ಪರಾರಿಯಾಗಿದ್ದು,ಅಜಿಲಮೊಗರು ಮಸೀದಿ ಬಳಿ ಬೈಕ್ ತೊರೆದು ಅಲ್ಲಿಂದಲೂ ಕಾಲ್ಕಿತ್ತಿದ್ದು,ಈ ಸಂದರ್ಭದಲ್ಲಿ ಒರ್ವನನ್ನು ಸ್ಥಳೀಯರು ಹಿಡಿದು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಪೊಲೀಸರು ಮಾತ್ರ ಈ ಘಟನೆ ಮತ್ತು ಒರ್ವನನ್ನು ಬಂಧಿಸಿರುವ ಬಗ್ಗೆ ಮಾಹಿತಿಯೇ ನೀಡುತ್ತಿಲ್ಲ.