ಬಂಟ್ವಾಳ : 2016-17 ರ ಸಾಲಿನ 4059-80-051-0-29-386 ಇಲಾಖಾ ಕಟ್ಟಡಗಳು ಯೋಜನೆಯಡಿ ರೂ.120.00ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಲೋಕೋಪಯೋಗಿ ಇಲಾಖೆ ಉಪವಿಭಾಗದ ನೂತನ ಕಚೇರಿ ಕಟ್ಟಡದ ಶಿಲಾನ್ಯಾಸವನ್ನು ಕಚೇರಿ ಆವರಣದಲ್ಲಿ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ನೆರವೇರಿಸಿದರು.
ಗೇರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಜಿ.ಪಂ.ಸದಸ್ಯರಾದ ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಾಜಿ ತಾಪಂ.ಸದಸ್ಯರಾದ ಮಾಧವ ಮಾವೆ, ಐಡಾ ಸುರೇಶ್, ಮಂಗಳೂರು ವೃತ್ತ ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಕಾಂತರಾಜ್.ಬಿ.ಟಿ. , ಕಾರ್ಯಕಾರಿ ಇಂಜಿನಿಯರ್ ಗಣೇಶ್ ಅರಳಿಕಟ್ಟೆ, ಸಹಾಯಕ ಕಾರ್ಯಕಾರಿ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರುಗಳಾದ ಅಮೃತ್ ಕುಮಾರ್, ಪ್ರೀತಂ, ಗೋಪಾಲ್, ಅರುಣ್ ಪ್ರಕಾಶ್, ಗುತ್ತಿಗೆದಾರ ಎಸ್.ಪ್ರೇಮ್ನಾಥ್, ಪ್ರಮುಖರಾದ ಎಸ್.ಪಿ.ದಿನೇಶ್, ಖಾಸಿಂ, ಉಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 