ಬಂಟ್ವಾಳ : ದ ಕ ಜಿಲ್ಲೆಯನ್ನು ನಿರಂತರ ಅಶಾಂತಿ-ಅಸಹಿಷ್ಣುತೆಯ ನೆಲೆವೀಡಾಗಿ ಮಾಡಿದ ಕೀರ್ತಿ ಇಲ್ಲಿನ ಉಸ್ತುವಾರಿ ಸಚಿವ ಬಿ ರಮಾನಾಥ ಅವರಿಗೆ ಸಲ್ಲುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞ ವಿಟ್ಲ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.JDS Protest

ಹಿರಿಯ ಸಾಹಿತಿ, ವಿಚಾರವಾದಿ-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ವಾರ್ತಾಭಾರತಿ ಬಂಟ್ವಾಳ ವರದಿಗಾರ ಇಂತಿಯಾಝ್ ತುಂಬೆ ಅನ್ಯಾಯ ಬಂಧನದ ವಿರುದ್ದ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ವತಿಯಿಂದ ಬಿ ಸಿ ರೋಡು ಜಂಕ್ಷನ್‍ನಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶೀಸಿ ಮಾತನಾಡಿದ ಅವರು ಜೆಡಿಎಸ್ ಪರಮೋಚ್ಚ ನಾಯಕ ಎಚ್ ಡಿ ದೇವೇಗೌಡ ಅವರು ನಡೆಸಲುದ್ದೇಶಿಸಿದ್ದ ಶಾಂತಿ ಪಾದಯಾತ್ರೆಗೆ ಅವಕಾಶ ನೀಡದ ಕಾಂಗ್ರೆಸ್ ಸರಕಾರ ಬಳಿಕ ಬಿಜೆಪಿ ನೇತತ್ವದ ಮಂಗಳೂರು ಚಲೋ ಕಾರ್ಯಕ್ರಮ ನಿಯಂತ್ರಿಸಲಾಗದೆ ತಾಪತ್ರಯ ಮೈಮೇಳೆದುಕೊಂಡಿದೆ ಎಂದು ಆರೋಪಿಸಿದರು. ಜಿಲ್ಲೆಯ ಪೊಲೀಸ್ ಅಧಿಕಾರಿಗಳಾಗಲೀ, ಜಿಲ್ಲಾಧಿಕಾರಿಗಳಾಗಲೀ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನಿಯಂತ್ರಣದಲ್ಲಿಲ್ಲ. ಬದಲಾಗಿ ಸಂಘ ಪರಿವಾರದ ನಿಯಂತ್ರಣದಲ್ಲಿದೆ ಎಂದು ಕುಂಞÂ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ, ಪಕ್ಷ ಪ್ರಮುಖರಾದ ಅಶ್ರಫ್ ಕ್ಲಲೆಗ, ಅಕ್ಷಿತ್ ಸುವರ್ಣ, ರಾಮ್‍ಗಣೇಶ್, ಅಬೂಬಕ್ಕರ್ ಅಮ್ಮುಂಜೆ, ಇಸ್ಮಾಯಿಲ್, ಇಬ್ರಾಹಿಂ ಕೈಲಾರ್, ಮುನೀರ್ ಮುಕ್ಕಚ್ಚೇರಿ, ಅಕ್ಬರ್ ಸಜಿಪ, ಸತ್ತಾರ್, ಮುಸ್ತಫಾ, ಅಬ್ದುಲ್ಲಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಿದ್ದು ಸರಕಾರದಿಂದ ಸಾವಿನ ಭಾಗ್ಯ : ಹಾರೂನ್
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಹಾ ಕಾರ್ಯದರ್ಶಿ ರಾಜ್ಯದಲ್ಲಿ ದಕ್ಷ ಅಧಿಕಾರಿಗಳಾದ ಡಿ ಕೆ ರವಿ ಐಎಎಸ್, ಡಿವೈಎಸ್ಪಿ, ಕಲ್ಲಪ್ಪ ಹಂಡಿಭಾಗ್, ಡಿವೈಎಸ್ಪಿ ಗಣಪತಿ, ಮೈಸೂರು ಟಿ ನರಸೀಪುರದ ತಹಶೀಲ್ದಾರ್ ಮೊದಲಾದವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಾಗೆಯೇ ವಿಚಾರವಾದಿಗಳೂ, ಚಿಂತಕರೂ ಹಾಗೂ ಸಾಹಿತಿಗಳೂ ಆಗಿರುವ ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಇವರುಗಳ ಅಮಾನುಷ ಹತ್ಯೆ ಹಾಗೂ ದ ಕ ಜಿಲ್ಲೆಯ ಅಮಾಯಕ ಯುವಕರ ಹತ್ಯೆ ಇದೆಲ್ಲವೂ ಸಿದ್ದರಾಮಯ್ಯ ಸರಕಾರದ ಸಾವಿನ ಭಾಗ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು. ಈ ಎಲ್ಲ ಘಟನೆಗಳಿಂದ ಸಂಪೂರ್ಣ ನೊಂದುಕೊಂಡಿರುವ ರಾಜ್ಯದ ಜನ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದು, ಮುಂದಿನ ದಿನಗಳಲ್ಲಿ ಜನ ಪರ್ಯಾಯ ರಾಜಕೀಯ ಶಕ್ತಿಯಾಗಿ ಜೆಡಿಎಸ್ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *