ಬಂಟ್ವಾಳ : ಪೊಲೀಸರ ದೌರ್ಜನ್ಯದ ಬಗ್ಗೆ ಮನೆ ಮಂದಿಯ ಆರೋಪದ ಬಗ್ಗೆ ಪತ್ರಕರ್ತರು ಪತ್ರಿಕಾ ವರದಿ ಮಾಡಿದರೆ ಅದೇಗೆ ಕೋಮು ಪ್ರಚೋದನೆ ಆಗಲು ಸಾಧ್ಯ. ಪೊಲೀಸರ ವಿರುದ್ದ ವರದಿ ಪ್ರಕಟಗೊಂಡಾಕ್ಷಣ ಕೋಮು ಪ್ರಚೋದನೆ ಆಗುವುದಾದರೆ ಪೊಲೀಸರು ಯಾವ ಕೋಮಿಗೆ ಸೇರಿದವರು ಎಂಬುದಕ್ಕೆ ವರದಿಗಾರನ ವಿರುದ್ದ ಕೇಸಿ ಜಡಿದು ಜೈಲಿಗಟ್ಟಿದ ಪೊಲೀಸರೇ ಉತ್ತರಿಸಬೇಕು ಎಂದು ವಿಚಾರವಾದಿ ದಲಿತ ಮುಖಂಡ ಭಾನುಚಂದ್ರ ಕೃಷ್ಣಾಪುರ ಪ್ರಶ್ನಿಸಿದರು.

Khandana Sabhe
ಬಂಟ್ವಾಳ ತಾಲೂಕಿನ ಕಾರ್ಯನಿತರ ಪತ್ರಕರ್ತ ಇಂತಿಯಾಝ್ ತುಂಬೆ ಅವರ ಅನ್ಯಾಯದ ಬಂಧನ ಹಾಗೂ ಸಾಹಿತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ವಿರೋಧಿಸಿ ಬಂಟ್ವಾಳ ತಾಲೂಕು ಜಾಗೃತ ಮಾಧ್ಯಮ ಬಳಗದ ನೇತೃತ್ವದಲ್ಲಿ ಸೋಮವಾರ ಬಿ ಸಿ ರೋಡಿನಲ್ಲಿ ನಡೆದ ಖಂಡನಾ ನಿರ್ಣಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಅಸಹಿಷ್ಣುತೆ ಬೆಳೆಯಲು ನಕ್ಸಲರೋ ಅಥವಾ ಇನ್ನಿತರ ಭಯೋತ್ಪಾಕರು ಕಾರಣರಲ್ಲ ಬದಲಾಗಿ ವಿಚಾರವಾದಿಗಳ ವೈಚಾರಿಕ ಸಿದ್ದಾಂತಗಳನ್ನು ಒಪ್ಪದೆ ಮಹಿಳೆಯರೂ ಎನ್ನದೆ ಅಮಾನುಷವಾಗಿ ಹತ್ಯೆಗೈಯುವ ಮನುವಾದಿ ಸಿದ್ದಾಂತದ ದುಷ್ಕರ್ಮಿಗಳಿಂದಲೇ ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಪತ್ರಕರ್ತರಾದ ಎ ಗೋಪಾಲ ಅಂಚನ್, ವೆಂಕಟೇಶ್ ಬಂಟ್ವಾಳ, ನಾದ ಮಣಿನಾಲ್ಕೂರು, ಮೋಹನ್ ಕೆ ಶ್ರೀಯಾನ್ ರಾಯಿ, ಯು ಮುಸ್ತಫಾ, ಸತೀಶ್ ಕಾರ್ತಿಕ್, ಫಾರೂಕ್ ಗೂಡಿನಬಳಿ, ಲತೀಫ್ ನೇರಳಕಟ್ಟೆ, ಪಿ ಎಂ ಅಶ್ರಫ್ ಪಾಣೆಮಂಗಳೂರು, ರತ್ನದೇವ್ ಪೂಂಜಾಲಕಟ್ಟೆ, ಖಾದರ್ ಫರಂಗಿಪೇಟೆ ಪ್ರಮುಖರಾದ ಕೆ ಎಚ್ ಅಬೂಬಕ್ಕರ್, ರಝಾಕ್ ಬಾಂಬಿಲ, ಅಬ್ದುಲ್ ಕರೀಂ ಬೊಳ್ಳಾಯಿ, ಅಕ್ಬರ್ ಅಲಿ, ಇಬ್ರಾಹಿಂ ಕೈಲಾರ್, ಗುರುವಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

 

By suddi9

Leave a Reply

Your email address will not be published. Required fields are marked *