ಬಂಟ್ವಾಳ: ಸಮಾಜದಲ್ಲಿ ವಿದ್ಯಾರ್ಥಿಗಳು ಆಧುನಿಕತೆಗೆ ಒತ್ತು ಕೊಡುವ ಜೊತೆಗೆ ವ್ಯಕ್ತಿದಲ್ಲಿ ಕೂಡಾ ಸಂಸ್ಕಾರಯುತ ಮತ್ತು ಪ್ರತಿಭಾನ್ವಿತರಾಗಿ ಸಾಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.  ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆ  ‘ಯುಪೋರಿಯಾ’-2017 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

14btl-Carmel
ರಾಜ್ಯದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ  ಸರ್ಕಾರ ಶೈಕ್ಷಣಿಕವಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಬಡಜನರು ಸ್ವಾಭಿಮಾನದ ಬದುಕು ನಡೆಸಲು ಸೂಕ್ತ ಕಾನೂನು ರೂಪಿಸುವ ಮೂಲಕ ಅವರಿಗೆ ಮನೆ ನಿವೇಶನ ಮತ್ತಿತರ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಆಹಾರ ಸಚಿವ ಯು. ಟಿ. ಖಾದರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿ ಗಳಿಗೆ ಸೌಹಾರ್ದತೆ ಮತ್ತು ನೈಜ ದೇಶ ಪ್ರೇಮ ಕಲಿಸುವ ವಿದ್ಯಾ ಸಂಸ್ಥೆಯಾಗಿ ಕಾರ್ಮಲ್  ಶಿಕ್ಷಣ ಸಂಸ್ಥೆಯು ಮೂಡಿ ಬಂದಿದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಭಗಿನಿ ಎಂ.ಸುಪ್ರಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ, ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರಿಯಾ ಕಾರ್ಲೊ , ಉಪ ಪ್ರಾಂಶುಪಾಲೆ ಭಗಿನಿ ಕ್ಲೇರಾ, ಕಾರ್ಯಕ್ರಮ ಸಂಯೋಜಕಿ ಪೂಜಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ  ಸಂಘದ ಅಧ್ಯಕ್ಷೆ ಫಸೀಹ ಖತೀಜಾ ಸ್ವಾಗತಿಸಿ, ಶ್ವೇತಾ ವಂದಿಸಿದರು. ಕಾರ್ಯದರ್ಶಿ  ವಿಪಿನ್ ಕ್ರಾಸ್ತ ಮತ್ತು ಜೊತೆ ಕಾರ್ಯದರ್ಶಿ  ಎರಿಕಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *