ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘವು 2016-17 ರಲ್ಲಿ 44,91ಲಕ್ಷ ರೂ.ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಜಿ.ಆನಂದ ತಿಳಿಸಿದ್ದಾರೆ. ಭಾನುವಾರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದಸಂಘದಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಾಭಾಂಶದಲ್ಲಿ ಸದಸ್ಯರಿಗೆ ಶೇ.8 ರಷ್ಟು ಡಿವಿಡೆಂಡ್ ನ್ನು ಪ್ರಕಟಿಸಿದರು. ಆದೇ ರೀತಿ 2016-17 ನೇ ಸಾಲಿನಲ್ಲಿ ಪಡಿತರ ವ್ಯವಹಾರದಲ್ಲೂ 68,772ರೂ.ಲಾಭವನ್ನು ಹೊಂದಿದೆ ಎಂದು ಅವರು ಲೆಕ್ಕ ಪತ್ರ ಪರಿಶೋಧನೆಯಲ್ಲಿಯೂ ಸಂಘ ‘ ಎ’ ವರ್ಗೀಕರಣವನ್ನು ಪಡೆದಿದೆ ಎಂದರು.ಸಂಘವು 23.10ಕೋ.ರೂ.ಠೇವಣಿಯನ್ನು ಹೊಂದಿದೆ.16-17ರಲ್ಲಿ 18.79 ಕೋ.ಸಾಲವನ್ನು ನೀಡಲಾಗಿದ್ದು,19.59 ಕೋ.ರೂ.ಸಾಲ ವಸೂಲಾತಿ ಮಾಡಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಶೇ.100 ರಷ್ಟ ಸಾಲ ವಸೂಲಾತಿ ಕ್ರಮಕೈಗೊಳ್ಳಲಾಗುವುದು ಎಂದರು.ಭವಿಷ್ಯದಲ್ಲಿ ಗ್ರಹ,ವಾಹನಸಾಲದ ಜತೆಗೆ ಕ್ರಷಿಗೆ ಹೆಚ್ಚಿನ ಒತ್ತು ನೀಡಲಾಗುವುದು ಹಾಗೆಯೇಬಿ.ಸಿ.ರೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಕಟ್ಟಡದ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿನೆಲ ಅಂತಸ್ತನ್ನು ವಾಣಿಜ್ಯ ಉದ್ದೇಶಗಳಿಗೆ ನೀಡಿ ಸಂಘದ ಅದಾಯ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.
ಸರಕಾರ ಘೋಷಿಸಿರುವಸಾಲಮನ್ನಾಕ್ಕೆ ಸಂಬಂಧಿಸಿ ಅನುದಾನ ಇನ್ನೂ ಕೂಡ ಬರಲಿಲ್ಲ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸಂಘದಲ್ಲಿಯೂ ೨೭ ಮಂದಿ ಸದಸ್ಯರು ಈಸೌಲಭ್ಯದಿಂದ ವಂಚಿತರಾಗಿದ್ದಾರೆ,ಈ ಸೌಲಭ್ಯ ಎಲ್ಲರಿಗೂದೊರಕಬೇಕೆಂಬುಗಮನದು ಸಂಘದ ಉದ್ದೇಶವಾಗಿದ್ದು,ಈನಿಟ್ಟಿ ನಲ್ಲಿ ಕೇಂದ್ರಬ್ಯಾಂಕ್ ನಮೇಲೆಒತ್ತಡಹೇರಲಾಗಿದ್ದು,ಸಿಗುವ ನಿರೀಕ್ಷ ಇದೆ ಎಂದರು. ನಿರ್ದೇಶಕರಾದಯಂ.ಕರುಣೇಂದ್ರ ಪೂಜಾರಿ,ಮನೋಹರ ಮೂಲ್ಯ,ಕೆ.ಎನ್.ಶೇಖರ್,ಕೆ.ಪ್ರಕಾಶ್,