ಬಂಟ್ವಾಳ: ಪುತ್ತೂರಿನಲ್ಲಿ ದೇಯಿ ಬೈದೆತಿಯ ಪುತ್ಹಳಿಯನ್ನು ಅಪವಿತ್ರಗೊಳಿಸಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ ಆರೋಪಿಯ ವಿರುದ್ದ ಹಿಂದೂ ಜಾಗರಣಾ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿಸಿರೋಡಿನ ಬಸ್ ನಿಲ್ದಾನದಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಂದರ್ಭ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕಾರಿಣಿ ಸದಸ್ಯ ರಾಧಕೃಷ್ಣ ಅಡ್ಯಂತಾಯ ಹಿಂದೂಗಳ ಆರಾಧ್ಯ ದೈವ ಮಾತೆ ದೇಯಿ ಬೈದೆತಿಯ ಪುತ್ಹಳಿಯನ್ನು ಅಪವಿತ್ರಗೊಳಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ಮತಾಂದ ಶಕ್ತಿಗಳಿಗೆ ಸರಿಯಾದ ಶಿಕ್ಷೆ ಆಗುವವರೆಗೆ ನಮ್ಮ ಹೋರಾಟ ನಡೆಯುತ್ತದೆ. ಹಿಂದೂ ಸಮಾಜಕ್ಕೆ ಅಪಮಾನ ಮತ್ತು ದ್ರೋಹ ಆಗಿದೆ ಇದನ್ನು ಸಹಿಸುವುದಿಲ್ಲ, ಹಿಂದೂಗಳ ಧಾರ್ಮಿಕ ಆಚಾರ ವಿಚಾರಗಳಿಗೆ ಮತ್ತು ನಂಬಿಕೆಗಳಿಗೆ ಅಪಚಾರ ವೆಸಗಿದ ನೀಚರಿಗೆ ರಾಜ್ಯ ಸರಕಾರ ಸರಿಯಾದ ಶಿಕ್ಷೆ ನೀಡುವ ಮೂಲಕ ನ್ಯಾಯ ಒದಗಿಸಬೇಕು ಮತ್ತು ದ.ಕಜಿಲ್ಲೆಯಲ್ಲಿ ಶಾಂತಿ ನೆಲಸಲು ಅವಕಾಶ ಮಾಡಬೇಕು ಎಂದು ಈ ಪ್ರತಿಭಟನೆಯ ಮೂಲಕ ಒತ್ತಾಯಿಸಿದರು. ಹಿಂದೂ ಮುಖಂಡ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ತೊಟ, ಜಾಗರಣಾ ವೇದಿಕೆಯ ಮಂಗಳೂರು ವಿಭಾಗ ಸಂಚಾಲಕ ರವಿರಾಜ್ ಬಿಸಿರೋಡ್ , ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ತಾಲೂಕು ಅಧ್ಯಕ್ಷರಾದ ಚಂದ್ರ ಕಲಾಯಿ, ಸಂಚಾಲಕರಾದ ಪ್ರಶಾಂತ ಕೆಂಪುಗುಡ್ಡೆ ಮತ್ತು ಸಹಸಂಚಾಲಕರಾದ ಕಿರಣ್ ಮೂರ್ಜೆ, ಸತೀಶ್ ಶೆಟ್ಟಿ ಪಡೆಂಕಿಮಾರ್ ಉಪಸ್ಥಿತರಿದ್ದರು
