ಸುದ್ದಿ9 ಕಿನ್ನಿಕಂಬಳ:ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ವತಿಯಿಂದ ಆ.8ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯು ಪುರೋಹಿತ್ ಕೆ.ಧನಂಜಯ ಆಚಾರ್ಯರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.




