741

ಮಡಂತ್ಯಾರು: ಇಲ್ಲಿನ ಶೀರ್ವಾದ್ ಸಭಾಂಗಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.20ರಂದು ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಾಲಿಸಿದ್ದು, ಇದರಲ್ಲಿ ಇಬ್ಬಬರಿಗೆ ಚಿಕಿತ್ಸೆ ಫಲಕಾರಿಗಾದೆ ರವಿವಾರ ಮೃತಪಟ್ಟಿದ್ದಾರೆ.

ಮೃತರನ್ನು ಅರ್ಚನಾ ಹಾಗೂ ಅವರ ಮಗು ಆಶಿ (6ತಿಂಗಳು) ಎಂದು ಗುರುತಿಸಲಾಗಿದೆ.

ಇನ್ನೂ ಘಟನೆಯಲ್ಲಿ ಜಗದೀಶ್, ವೈಷ್ಣವಿ ಅವರಿಗೆ ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

 ಘಟನೆ ವಿವರ: ಮಂಗಳೂರಿನ ಜಲ್ಲಿಗುಡ್ಡೆಯ ಜಯನಗರದ ನಿವಾಸಿ ಜಗದೀಶ್ ಅವರ ಪತ್ನಿ ಅರ್ಚನಾ, ಇಬ್ಬರು ಮಕ್ಕಳಾದ ಆಶಿ,ಯಶಿ ಹಾಗು ತಂಗಿ ಮಗಳು ವೈಷ್ಣವಿ ಜೊತೆ ಸೇರಿ ಬೆಳ್ತಂಗಡಿ ತಾಲೂಕಿನಲ್ಲಿರುವ ಸಂಬಂಧಿಕರೋರ್ವರ ಮನೆ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಲುತ್ತಿದ್ದ ವೇಳೆ ಸುಮಾರು ಸಂಜೆ 3ಕ್ಕೆ ಮಡಂತ್ಯಾರಿನಲ್ಲಿ ಲಾರಿಗೆ ಮುಖಾಮುಖಿ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *