ಬಂಟ್ವಾಳ: ತಾಲೂಕಿನ ಸಜೀಪ ಮೂಡ ಶ್ರೀ ಪಣೋಲಿ ಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆಯುವ ಅಗೇಲು ಸೇವೆಗೆ ಬೇಕಾಗುವ ಕೋಳಿ ಇತ್ತೀಚಿನ ದಿನಗಳಲ್ಲಿ ಅಭಾವ ಇರುವುದನ್ನು ಮನಗಂಡು ಅಗೇಲು ಸೇವೆಗೆ ಬೇಕಾಗುವ ಕೋಳಿ ಮತ್ತು ಇತರ ಸಾಮಾಗ್ರಿ (1 ಸೇರು ಅಕ್ಕಿ, 1 ತೆಂಗಿನಕಾಯಿ, ಮತ್ತು ಬಾಳೆ ಎಲೆ ತುದಿ 5 ತುಂಡು ಗಳನ್ನು ಸ್ವತಃ ಭಕ್ತಾಧಿಗಳೇ ಪೂವಾಹ್ನ ಗಂಟೆ 10.30 ರ ಒಳಗೆ ತಂದು ಕ್ಷೇತ್ರಕ್ಕೆ ಒಪ್ಪಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಪ್ರಕಟನೆ ತಿಳಿಸಿದೆ.