8 btl bus (2)

ಬಂಟ್ವಾಳ: ಬಿ.ಸಿ.ರೋಡ್ ಘಟಕದಿಂದ ಬೆಂಗಳೂರಿಗೆ ಚಲಿಸಲಿರುವ ನಾನ್ ಎಸಿ ಸ್ಲೀಪರ್ ನೂತನ ಎರಡು ಬಸ್ ಗಳ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ಹಸಿರು ನಿಶಾನೆ ತೋರಿಸುವ ಮೂಲಕ ಗುರುವಾರ ಇಲ್ಲಿನ  ರೈ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಬಳಿ ಮಾತನಾಡಿದ ಅವರು, ಬಿ.ಸಿ.ರೋಡ್ ನಿಂದ ಬೆಂಗಳೂರಿಗೆ ಬಸ್ ಸಂಚಾರ ಕಲ್ಪಿಸುವಂತೆ ಸಾರ್ವಜನಿಕರು ಬೇಡಿಕೆಯಿಟ್ಟಿದ್ದು, ಅದರಂತೆ ಇಂದು ನಾವು ಬಹುಬೇಡಿಕೆ ಈಡೇರಿಸಿದ್ದೇವೆ ಎಂದವರು, ಮುಂದಿನ ದಿನಗಳಲ್ಲಿ ಬಿ.ಸಿ.ರೋಡ್ ಘಟಕದಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ವೆಂಕಪ್ಪ ಪೂಜಾರಿ, ಪ್ರತಿಭಾ ಕುಲಾಯಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ, ಬಿ.ಸಿ.ರೋಡ್ ಘಟಕದ ವ್ಯವಸ್ಥಾಪಕ ಪಿ.ಇಸ್ಮಾಯೀಲ್, ಮತ್ತಿತರರು ಉಪಸ್ಥಿತರಿದ್ದರು.

ಬಸ್ ಚಲಿಸುವ ವೇಳಾಪಟ್ಟಿ: ರಾತ್ರಿ 9ಕ್ಕೆ  ಬಿ.ಸಿ.ರೋಡ್ ನಿಂದ ತೆರಲಿ ಮುಂಜಾನೆ ಬೆಂಗಳೂರಿಗೆ 5ಕ್ಕೆ ತಲುಪಲಿದ್ದು, ಅದೇ ರೀತಿ ಬೆಂಗಳೂರಿನಿಂದ ರಾತ್ರಿ 9.51ಕ್ಕೆ   ಮರು ಪ್ರಾಯಾಣಿಸಲಿದೆ. ಬಿ.ಸಿ.ರೋಡಿಗೆ ಬೆಳಗ್ಗೆ 5.51ಕ್ಕೆ ತಲುಪಲಿದೆ. ಈ ಬಸ್ ನ ಮುಂಗಡ ಬುಕ್ಕಿಂಗೆ ಆನ್ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

By suddi9

Leave a Reply

Your email address will not be published. Required fields are marked *