ಕೈಕಂಬ: ಕ್ರೀಡೆಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡುವಂತಾಗಬೇಕು. ಯುವಜನರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದೇ ಇಂತಹ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಂಡು ಸ್ವಸ್ಥ ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಸಹಕರಿಸಬೇಕು. ಎಂದು ಬಜಪೆ ಠಾಣೆಯ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರು ಜನರಿಗೆ ಸಲಹೆ ನೀಡಿದರು. ಅವರು ಶನಿವಾರ ಸೌಹಾರ್ದ ಸ್ಪೋಟ್ಸ್ ಕ್ಲಬ್ (ರಿ) ಕುಪ್ಪೆಪದವು ಇದರ ರಜತ ವರ್ಷಾಚರಣೆ ಸಂದರ್ಭದಲ್ಲಿ ಕಿಲೆಂಜಾರು ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಸೌಹಾರ್ದ ಪ್ರಿಮಿಯರ್ ಲೀಗ್ ಸೀಸನ್ 2 ರ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದರು.
ದೀಪ ಬೆಳಗಿಸಿ ಪಂದ್ಯಾಟವನ್ನು ಉದ್ಘಾಟಿಸಿದ ಪರಶಿವ ಮೂರ್ತಿಯವರು ಬೌಲಿಂಗ್ ಮಾಡುವ ಮೂಲಕ ಪಿಚ್ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಡಿ.ವೈ.ಎಫ್.ಐ.ನ ಜಿಲ್ಲಾ ಮುಖಂಡ ವಸಂತ ಆಚಾರಿ, ಗ್ರಾಮ ಪಂಚಾಯತ್ ಸದಸ್ಯ ಹಿರಣ್ಯಾಕ್ಷ ಕೋಟ್ಯಾನ್, ಅಬೂಬಕ್ಕರ್ ಕಲ್ಲಾಡಿ, ಉದ್ಯಮಿ ಬಾಲಸುಬ್ರಮಣ್ಯ, ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಉಮರಬ್ಬ, ಸ್ಪೋಟ್ಸ್ ಕ್ಲಬ್ನ ಗೌರವಾಧ್ಯಕ್ಷ ಬಾಲಕೃಷ್ಣ .ಕೆ, ಅಧ್ಯಕ್ಷ ಹಸನ್ ಭಾವ, ಸಲಹೆಗಾರ ಎನ್.ಎ.ಲತೀಫ್, ಅಬ್ದುಲ್ ರಹಿಮಾನ್, ಮಹಮ್ಮದ್ ಮುಸ್ತಾಫ, ಅಬ್ದುಲ್ ಘನಿ ಮುಂತಾದವರು ಉಪಸ್ಥಿತರಿದ್ದರು. 8 ತಂಡಗಳು ಭಾಗವಹಿಸುವ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮವಾಗಿ ಚಾಂಪಿಯನ್ ಟ್ರೋಪಿ ಮತ್ತು 45 ಸಾವಿರ ನಗದು ಮತ್ತು ರನ್ನರ್ ಆಪ್ ತಂಡಕ್ಕೆ, 27ಸಾವಿರ ನಗದು ಮತ್ತು ಟ್ರೋಪಿ ನೀಡಲಾಗುತ್ತಿದೆ. ಮುಕ್ತ ಟಿ.ವಿಯ ನಿರೂಪಕಿ ಕುಮಾರಿ ಶುಭಾಶಯ ಕಾರ್ಯಕ್ರಮ ನಿರೂಪಿಸಿದರು.