ಕೈಕಂಬ:ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ, ಮಳಲಿ ಮಟ್ಟಿ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಗುರುವಾರದಿಂದ ಮಾ.9 ಶುಕ್ರವಾರದವರೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ ನಿರ್ಮಲನಾಥ್ ಮಹಾರಾಜ್ ಜೋಗಿಮಠ, ಕದ್ರಿ ಇವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳು ಶ್ರೀ ಕ್ಷೇತ್ರ ಕದ್ರಿ ಇವರ ನೇತೃತ್ವದಲ್ಲಿ ನಡೆಯಲಿದೆ.

1
ಮಾ. 8. ಗುರುವಾರ ಬೆಳಿಗ್ಗೆ 6-45ಕ್ಕೆ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ, 8-00ರಿಂದ : ಮಹಿಷಂದಾಯ, ಧೂಮಾವತಿ ಬಂಟ ದೈವಗಳ ಭಂಡಾರ ಏರುವುದು, 8-30ರಿಂದ : ಸಾಮೂಹಿಕ ಶತ ರುದ್ರಾಭಿಷೇಕ, ಮಧ್ಯಾಹ್ನ ಗಂಟೆ 12ರಿಂದ ಪೂರ್ಣಾಹಿತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 1-30ರಿಂದ : ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಕ್ಕ್ರತಿಕ ನೃತ್ಯ ಕಾರ್ಯಕ್ರಮ, ಸಾಯಂಕಾಲ 6-00ರಿಂದ : ಸ್ಥಳೀಯ ಪ್ರತಿಭೆಗಳಿಂದ ಭಕ್ತಿಗಾನ ವೈಭವ, ರಾತ್ರಿ ಗಂಟೆ 8-00ರಿಂದ : ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 9-00ರಿಂದ : ಮಹಿಷಂದಾಯ, ಧೂಮಾವತಿ ಬಂಟ ದೈವಗಳ ನೇಮೋತ್ಸವ.
ಮಾ. 9 ಶುಕ್ರವಾರ ಸಾಯಂಕಾಲ 6-30ರಿಂದ : ಬಂಗಾರ್ ಕಲಾವಿದೆರ್ ಗಂಜಿಮಠ, ಇವರಿಂದ ಭಾಸ್ಕರೆ ಬಂಗೊಡುಲ್ಲೆ ತುಳು ಸಾಮಾಜಿಕ ಹಾಸ್ಯಮಯ ನಾಟಕ, ರಾತ್ರಿ ಗಂಟೆ 8-ರಿಂದ : ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ. 9-30ರಿಂದ : ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ ಬಲಿಸೇವೆ.

By suddi9

Leave a Reply

Your email address will not be published. Required fields are marked *